
ಕಾರ್ಕಳ, ಆ. 11- ಡಾl ವಿನಾಯಕ ಎನ್. ಅಂಚನ್ ಅವರು ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ MD (Dermatology, Venereology & Leprosy)ಯಲ್ಲಿ ಗರಿಷ್ಠ ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿ ‘ಬಂಗಾರದ ಪದಕ’ವನ್ನು ಪಡೆದುಕೊಂಡಿದ್ದಾರೆ
ಇವರು ಉಡುಪಿ ಆಯುಷ್ ಜಿಲ್ಲಾಧ್ಯಕ್ಷ (AFI) ಖ್ಯಾತ ಆಯುರ್ವೇದ ತಜ್ಞ ಡಾl ಎನ್. ಟಿ. ಅಂಚನ್ ಹಾಗೂ ಕಲ್ಯಾ ಕೈರಬೆಟ್ಟು ದೊಡ್ಡಮನೆ ಸುಚರಿತಾ ಎನ್. ಅಂಚನ್ ದಂಪತಿಯ ಪುತ್ರ. ಇವರ ಸಹೋದರ ಮೇಜರ್ ಡಾl ಅರ್ಜುನ್ ಅಂಚನ್ ಭಾರತೀಯ ಸೇನೆಯಲ್ಲಿ ವೈದ್ಯಾಧಿಕಾರಿ, ಸಹೋದರಿ ಡಾl ಪ್ರಜ್ಞ್ಯಾ ವೀರೇಂದ್ರ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸ್ತ್ರೀ ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.