-ಸುಪ್ರೀಂ ಕೋರ್ಟ್ ಗರಂ -ಸಿಬಿಐ ತನಿಖೆಗೆ ಅನುಮತಿ
-ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ?
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ/ಕೊಲೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರ ವರ್ತನೆಗೆ ನ್ಯಾಯಾಲಯ ಕಟುವಾಗಿ ಟೀಕಿಸಿದೆ. ಇದುವರೆಗಿನ ತನಿಖೆಯ ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ಅವರಿಗೆ ಆದೇಶಿಸಿದೆ.
ಪ್ರಕರಣವನ್ನು ಬಿಹಾರದಿಂದ ಮುಂಬಯಿಗೆ ವರ್ಗಾಯಿಸಬೇಕೆಂಬ ಸುಶಾಂತ್ ಪ್ರಿಯತಮೆ ರಿಯಾ ಚಕ್ರವರ್ತಿ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಇದರಿಂದ ರಿಯಾ ಆಘಾತಗೊಂಡಿದ್ದು, ತನ್ನನ್ನು ಬಂಧಿಸಬೇಡಿ ಎಂದು ಆಕೆ ರೋಧಿಸುತ್ತಿರುವುದೂ ಕಂಡು ಬಂದಿತು.
ಈ ನಡುವೆ, ಸಿಬಿಐನಿಂದ ಪ್ರಕರಣದ ತನಿಖೆಯನ್ನು ನಡೆಸಬೇಕೆಂಬ ಬಿಹಾರ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಸುಶಾಂತನ ಕುಟುಂಬದವರು ಬಿಹಾರದಲ್ಲಿ ಕೇಸು ದಾಖಲಿಸಿದ್ದರು. ತನಿಖೆಗಾಗಿ ಮುಂಬಯಿಗೆ ಬಂದ ಬಿಹಾರ ಪೊಲೀಸರಿಗೆ ಯಾವುದೇ ರೀತಿಯ ಸಹಕಾರ ನೀಡಿರಲಿಲ್ಲ. ಜತೆಗೆ ಬಿಹಾರ ಪೊಲೀಸ್ ಅಧಿಕಾರಿಯನ್ನೇ ಕ್ವಾರಂಟೈನಿನಲ್ಲಿ ಕೂರಿಸಿದ್ದರು!
ಮುಂಬಯಿ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವರೆಂಬ ಶಂಕೆ ಎಲ್ಲೆಡೆ ವ್ಯಕ್ತವಾಗಿತ್ತು. ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತ್ತು.
ಸುಶಾಂತನದು ಆತ್ಮಹತ್ಯೆಯಲ್ಲ, ಅದೊಂದು ಕೊಲೆ. ಈ ಕೊಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಪಾತ್ರವಿದೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ನಾರಾಯಣ ರಾಣೆ ಮಂಗಳವಾರ ಆದಿತ್ಯನ ಹೆಸರು ಹೇಳದೆ ಆರೋಪಿಸಿದ್ದರು. ಹೀಗಾಗಿ ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದರು.
ಸುಶಾಂತನದು ಆತ್ಮಹತ್ಯೆ ಎಂದು ಆರಂಭದಲ್ಲೇ ಮುಂಬಯಿ ಪೊಲೀಸರು ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದರು. ಆದರೆ ರಿಪಬ್ಲಿಕ್ ಟಿವಿಯ ಅರ್ಣಬ್ ಗೋಸ್ವಾಮಿ ಪಟ್ಟು ಬಿಡದೆ ಪ್ರಕರಣದ ಹಿಂದೆ ಬಿದ್ದ ಬಳಿಕ ದೇಶದಾದ್ಯಂತ ಸಂಚಲನ ಮೂಡಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಹೆಚ್ಚುತ್ತಿತ್ತು.
ರಾಣೆ ಆರೋಪ ಮಾಡಲು ಕಾರಣವಾದ ಅಂಶಗಳು ಹೀಗಿವೆ:
ಸುಶಾಂತನ ಆತ್ಮಹತ್ಯೆ (?)ಗೆ ನಾಲ್ಕು ದಿನ ಮೊದಲು ಆತನ ಕಾರ್ಯದರ್ಶಿ ದಿಶಾ ಸಾಲಿಯಾನಳ ಆತ್ಮಹತ್ಯೆ (?)ಯೂ ಘಟಿಸುತ್ತದೆ. ಈ ಎರಡೂ ಘಟನೆಗಳ ನಡುವೆ ಸಂಬಂಧವಿದೆ ಎಂಬ ವಿಷಯ ಜನಸಾಮಾನ್ಯರಿಗೂ ಹೊಳೆಯುತ್ತದೆ. ಆದರೆ ಪೊಲೀಸರು ಇದನ್ನು ಪ್ರತ್ಯೇಕ ಪ್ರಕರಣವೆಂದು ಪರಿಗಣಿಸಿದ್ದರು.
ಸುಶಾಂತನ ಜೊತೆ ಲಿವ್ ಇನ್ ರಿಲೇಶನಿನಲ್ಲಿದ್ದ ರಿಯಾ, ಆತನ 15 ಕೋಟಿ ರೂ. ಠೇವಣಿಯನ್ನು 1.5 ಕೋಟಿ ರೂ.ಗೆ ಇಳಿಸಿದ್ದಳೆಂಬ ಮಾಹಿತಿಯೂ ದೊರೆತಿತ್ತು. ಆದರೆ ಪೊಲೀಸರು ಆಕೆಯ ವಿಚಾರಣೆ ನಡೆಸಲೇ ಇಲ್ಲ!
. ಜೂ. 9ರ ರಾತ್ರಿ ಸೂರಜ್ ಪಾಂಚೋಲಿ ಎಂಬಾತ ಮುಂಬಯಿನ ತನ್ನ ಪೆಂಟ್ ಹೌಸಿನಲ್ಲಿ ನಡೆಯುವ ಪಾರ್ಟಿಗೆ ದಿಶಾ ಸಾಲಿಯಾನಳನ್ನು ಆಹ್ವಾನಿಸುತ್ತಾನೆ. ಅಲ್ಲಿ ಆದಿತ್ಯ ಠಾಕ್ರೆ, ಸಿದ್ದಾರ್ಥ ಪಿಠಾಣಿ, ಸಂದೀಪ ಸಿಂಗ್, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್, ರಿಯಾ ಸೋದರ ಶೌಮಿಕ್ ಚಕ್ರವರ್ತಿ ಇರುತ್ತಾರೆ. ಅಂದು ದಿಶಾ ಜೊತೆಗೆ ಏನೋ ಗಡಿಬಿಡಿಯಾಗಿದೆ ಎಂಬ ಅನುಮಾನ. ಮತ್ತು ಆಕೆಯನ್ನು 14ನೇ ಮಹಡಿಯಿಂದ ಕೆಳಗೆ ಎಸೆಯಲಾಗುತ್ತದೆ.
ಈ ವಿಷಯ ಸುಶಾಂತ್ ಗೆ ಗೊತ್ತಾಗುತ್ತದೆ. ಆತ ಪ್ರತಿಭಟನೆಗೆ ಮುಂದಾದಾಗ ಆತನ ಬಾಯಿ ಮುಚ್ಚಿಸಲು ಈ ಅತ್ಯಾಚಾರದ ಆರೋಪಿಗಳು ಜೂ. 13ರ ರಾತ್ರಿ ಸುಶಾಂತನನ್ನು ಆತನ ನಿವಾಸದಲ್ಲಿ ಮುಗಿಸುತ್ತಾರೆ. ಆತನ ಕೊಲೆಗೆ ನಾಯಿಯ ಕೊರಳ ಪಟ್ಟಿಯನ್ನು ಬಳಸಲಾಯಿತು ಎಂಬ ಮಾಹಿತಿಯೂ ಹರಿದಾಡಿತು.
ಆದರೆ ಮುಂಬಯಿ ಪೊಲೀಸರು ಪ್ರಕರಣದ ಬಗ್ಗೆ ಯಾವ ಆಸಕ್ತಿಯನ್ನು ಕೂಡ ತೋರಲಿಲ್ಲ. ಇದಕ್ಕೆ ಪೂರಕವಾಗಿ ಸುಶಾಂತನ ಪಾರ್ಥಿವ ಶರೀರದ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಯಿತು. ನೇಣು ಹಾಕಿಕೊಂಡವರ ಕಣ್ಣುಗಳು ಹೊರ ಬಂದಿರುತ್ತವೆ, ನಾಲಗೆ ಹೊರಚಾಚಿರುತ್ತದೆ. ಆದರೆ ಸುಶಾಂತನಿಗೆ ಹೀಗಾಗಿಲ್ಲ. ಹಣೆ ಮತ್ತು ಗಲ್ಲದ ಮೇಲೆ ಊತವಿದೆ. ಇದು ಆತನ ಮೇಲೆ ಹಲ್ಲೆಯಾಗಿರುವುದನ್ನು ಸೂಚಿಸುತ್ತದೆ ಎಂಬ ವಿವರಣೆಯೂ ಲಭ್ಯವಾಯಿತು.
ಪ್ರಕರಣದ ತನಿಖೆ ಇನ್ನು ಸರ್ವೋಚ್ಚ ನ್ಯಾಯಾಲಯದ ನಿಗಾದಲ್ಲಿ ನಡೆಯಲಿರುವುದರಿಂದ ಸುಶಾಂತನಿಗೆ ನ್ಯಾಯ ದೊರೆಯುವ ನಿರೀಕ್ಷೆ ಉಜ್ವಲವಾಗಿದೆ.
ರಮಾನಾಥ ಶಾನುಬಾಗ್