ಸಾಣೂರು : ಬೃಹತ್‌ ಭಗವಾಧ್ವಜ ಸ್ಥಾಪನೆ

ಕಾರ್ಕಳ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಕಲ್ಲು ಹಾಸಿದ ಸಂದರ್ಭ ಕಾರ್ಕಳದ ಸಾಣೂರು ಪುಲ್ಕೇರಿಯಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಬೃಹತ್‌ ಭಗವಾಧ್ವಜ ಸ್ಥಾಪಿಸಿದರು. ಪುಲ್ಕೇರಿ ಬೈಪಾಸ್ ಸರ್ಕಲ್‌ ನಲ್ಲಿ ಧ್ವಜ ಸ್ಥಾಪಿಸಲಾಯಿತು. ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್., ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡರಾದ ನ್ಯಾಯವಾದಿ ಎಂ.ಕೆ., ವಿಜಯ್ ಕುಮಾರ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ, ರಮೇಶ್ ಹೆಗಡೆ, ಕರುಣಾಕರ್‌ ಕೋಟ್ಯಾನ್, ಜನಪ್ರತಿನಿಧಿಗಳಾದ ದಿವ್ಯಶ್ರೀ ಗಿರೀಶ್ ಅಮೀನ್, ಪ್ರವೀಣ್ ಕೋಟ್ಯಾನ್, ಸುಮಾ ಕೇಶವ್ ಸೇರಿದಂತೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ. ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ರಾಮ ಭಟ್‌ ನೇತೃತ್ವದಲ್ಲಿ, ದೇವರಿಗೆ ವಿಶೇಷ ರುದ್ರಾಭಿಷೇಕ ಸೇವೆ ನಡೆಯಿತು.

error: Content is protected !!
Scroll to Top