ದಿಲ್ಲಿ, ಆ. 1 : ರಾಜ್ಯಸಭಾ ಸದಸ್ಯ ಹಾಗೂ ಸಮಾಜವಾದಿ ಪಾರ್ಟಿಯ ಮಾಜಿ ನಾಯಕ ಅಮರ್ ಸಿಂಗ್ (64) ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದೀಚೆಗೆ ಅವರು ಸಿಂಗಾಪುರದ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.
ದೀರ್ಘ ಕಾಲ ಸಮಾಜವಾದಿ ಪಾರ್ಟಿಯಲ್ಲಿದ್ದ ಅಮರ್ ಸಿಂಗ್ ಅವರನ್ನು 2017ರಲ್ಲಿ ಅಖಿಲೇಶ್ ಯಾದವ್ ಪಕ್ಷದಿಂದ ಉಚ್ಛಾಟಿಸಿದ್ದರು.
ಸಕ್ರಿಯ ರಾಜಕಾರಣದಲ್ಲಿ ಇರುವಾಗ ಅಧಿಕಾರದ ಪಡಸಾಲೆಯಲ್ಲೇ ಓಡಾಡುತ್ತಿದ್ದ ಅಮರ್ ಸಿಂಗ್ ಪಕ್ಷಗಳ ನಡುವೆ ಮೈತ್ರಿ ಬೆಸೆಯುವುದು , ಕಡಿಯುವುದು ಮಂತಾದ ಕೆಲಸಗಳಲ್ಲಿ ನಿಸ್ಸೀಮರಾಗಿದ್ದರು. ಈ ಕಾರಣಕ್ಕೆ ಅವರಿಗೆ ಪವರ್ ಬ್ರೋಕರ್ ಎಂಬ ಹೆಸರಿತ್ತು.