ಕಾರ್ಕಳ: ಬಸ್‌ಗೆ ಬೈಕ್ ಡಿಕ್ಕಿ ಸವಾರನಿಗೆ ಗಾಯ

ಕಾರ್ಕಳ: ಇಲ್ಲಿನ ಕರಿಯಕಲ್ಲು ಬಳಿ ಮಂಗಳವಾರ ಅಪರಾಹ್ನ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಸವಾರನನ್ನು ನವೀನ್‌ ಎಂದು ಗುರುತಿಸಲಾಗಿದೆ. ಬಜಗೋಳಿ ಕಡೆಯಿಂದ ಬರುತ್ತಿದ್ದ ಬಸ್ ಡಿವೈಡರ್ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗಾಯಾಳುವನ್ನು ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































error: Content is protected !!
Scroll to Top