ಕಾರ್ಕಳದಲ್ಲಿ ಮದ್ಯವರ್ಜನ ಶಿಬಿರ – ವ್ಯವಸ್ಥಾಪನಾ ಸಮಿತಿ ರಚನೆ

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಹಾಗೂ ಇತರ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಕಳದಲ್ಲಿ ಮದ್ಯವರ್ಜನ ಶಿಬಿರ ನಡೆಯುವ ಕುರಿತು ಜು. 30ರಂದು ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕಾರ್ಕಳದಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸುವ ಕುರಿತು ವ್ಯವಸ್ಥಾಪನಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉದ್ಯಮಿ ವಿಜಯ ಶೆಟ್ಟಿ, ಗೌರವಾಧ್ಯಕ್ಷರಾಗಿ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ, ಕೋಶಾಧಿಕಾರಿಯಾಗಿ ಉದಯ ವಿ. ಶೆಟ್ಟಿ ಕುಕ್ಕುಂದೂರು, ಕಾರ್ಯದರ್ಶಿಯಾಗಿ ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಉಪಾಧ್ಯಕ್ಷರಾಗಿ ಅವಿನಾಶ್‌ ಶೆಟ್ಟಿ ಕಾರ್ಕಳ, ಅಶೋಕ್‌ ಕುಮಾರ್‌ ಜೈನ್‌ ಹೊಸ್ಮಾರು, ಪದ್ಮಪ್ರಸಾದ್‌ ಜೈನ್‌ ನೆಲ್ಲಿಕಾರು, ಕಿಶೋರ್‌ ಶೆಟ್ಟಿ ಮಿಯ್ಯಾರು, ಪ್ರಕಾಶ್‌ ರಾವ್‌ ಕಾರ್ಕಳ, ಯೋಗಿಶ್‌ ಸಾಲಿಯನ್‌ ಕುಕ್ಕುಂದೂರು, ರವೀಂದ್ರ ನಾಯಕ್‌ ನೀರೆ ಬೈಲೂರು, ನಂದಿನಿ ಶೆಟ್ಟಿ ಕಾರ್ಕಳ, ಅಶೋಕ್‌ ಸುವರ್ಣ ಕಾರ್ಕಳ, ಗೌರವ ಸಲಹೆಗಾರರಾಗಿ ಜನಜಾಗೃತಿ ವೇದಿಕೆಯ ನಿಯೋಜಿತ ಅಧ್ಯಕ್ಷ ವೃಷಭರಾಜ್‌ ಕಡಂಬ, ರವೀಂದ್ರ ಪ್ರಭು ಕಡಾರಿ, ಸಿರಿಯಣ್ಣ ಶೆಟ್ಟಿ, ಕಮಲಾಕ್ಷ ನಾಯಕ್‌ ಕುಕ್ಕುಂದೂರು, ಸದಾಶಿವ ಶೆಟ್ಟಿ ತೆಳ್ಳಾರು, ಮೋಹನ ಪಡಿವಾಳ್, ಪ್ರಭಾತ್‌ ಜೈನ್‌,‌ ಅಶೋಕ್‌ ಶೆಟ್ಟಿ ಬಂಗ್ಲೆಗುಡ್ಡೆ, ಉದಯ ಕುಮಾರ್‌ ಹೆಗ್ಡೆ ಬೈಲೂರು, ಪ್ರಸಾದ್‌ ಶೆಟ್ಟಿ ಪೆರ್ವಾಜೆ, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್‌, ತ್ರಿವಿಕ್ರಮ ಕಿಣಿ ಕುಕ್ಕುಂದೂರು, ದಿನೇಶ್‌ ನಾಯಕ್‌ ತೆಳ್ಳಾರು, ವಾಸು ಶೆಟ್ಟಿ ಹಿರ್ಗಾನ, ಜೀತೆಂದ್ರ ಕುಮಾರ್‌, ಜಯ ಟಿ. ಶೆಟ್ಟಿ, ಅಶೋಕ್‌ ನಾಯಕ್‌ ಹಿರ್ಗಾನ, ವಾಸು ಶೆಟ್ಟಿ ಹಿರ್ಗಾನ, ಸಂತೋಷ್‌ ಶೆಟ್ಟಿ ಹಿರ್ಗಾನ, ಹಿತೇಶ್‌ ಶೆಟ್ಟಿ ಬಜಗೋಳಿ, ಅಂತೋನಿ ಡಿಸೋಜಾ ಅವರನ್ನು ಆಯ್ಕೆ ಮಾಡಲಾಯಿತು.
ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಉದಯ ಕುಮಾರ್‌ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್‌ ಆಚಾರ್ಯ ಕಾರ್ಯಕ್ರಮ ರೂಪುರೇಷೆ ಕುರಿತು ಮಾಹಿತಿ ನೀಡಿದರು. ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿ, ವಲಯ ಮೇಲ್ಚಿಚಾರಕಿ ಗೀತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top