ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಮನೆಗಳಿಂದ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹ ಮಾಡದ ಪರಿಣಾಮ ಎಲ್ಲಾ ಕಡೆಯಲ್ಲಿಯೂ ಕಸದ ರಾಶಿ ತುಂಬಿದ್ದು, ಗಬ್ಬು ವಾಸನೆ ಬೀರುತ್ತಿದೆ. ಸಾರ್ವಜನಿಕರು ನಡೆದಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪುರಸಭೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಪುರಸಭಾ ನಿಕಟಪೂರ್ವ ಸದಸ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸ ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲವಾದರೂ ಶಾಸಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಶಾಸಕ ಇರಬೇಕಿತ್ತು ಎಂದೆನಿಸುತ್ತಿದೆ ಎಂದು ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಖಾಸಗಿ ಸಂಸ್ಥೆಯವರು ಕಸ ವಿಂಗಡಣೆ ಜವಾಬ್ದಾರಿ ವಹಿಸಿಕೊಂಡಿದ್ದ ಪರಿಣಾಮ ಸಮರ್ಪಕವಾಗಿ‌ ಕಸ ವಿಲೇವಾರಿಯಾಗುತ್ತಿತ್ತು. ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ಉತ್ತಮ ಸೇವೆಯನ್ನು ಮಾಡುತ್ತಿದ್ದರು. ಆದರೆ, ಅವರಿಗೆ ನೀಡಿದ ರಾಜಕೀಯ ಪ್ರೇರಿತ ಕಿರುಕುಳದ ಪರಿಣಾಮ ಅವರು ಅರ್ಧದಲ್ಲೇ ಬಿಟ್ಟುಹೋದ ಪರಿಣಾಮ ಸಾರ್ವಜನಿಕರು ಸಮಸ್ಯೆಯನ್ನು ಅನುಭವಿಸುವಂತಾಗಿದೆ ಎಂದರು.
ನಮ್ಮ ಆಡಳಿತದ ಅವಧಿಯಲ್ಲಿ ಕಸ ವಿಲೇವಾರಿಯಲ್ಲಿ ಕಾರ್ಕಳ ಪುರಸಭೆಯು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಪಾತ್ರವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಶಾಸಕರು ತಕ್ಷಣ ಕಾಳಜಿ ವಹಿಸಿ ಕ್ರಮ ಜರುಗಿಸಲು ಪ್ರಯತ್ನಿಸಬೇಕು ಎಂದು ಶುಭದ ರಾವ್ ಆಗ್ರಹಿಸಿದ್ದಾರೆ.

















































error: Content is protected !!
Scroll to Top