ಬಾವಿಗೆ ಬಿದ್ದ ವೃದ್ಧನ ರಕ್ಷಣೆ

ಕಾರ್ಕಳ : ಬಾವಿಗೆ ಬಿದ್ದ ವೃದ್ಧರೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ದಾನಶಾಲೆ ಗೊಮ್ಮಟ ಬೆಟ್ಟದ ಸಮೀಪ ಜೂ. 4ರಂದು ನಡೆದಿದೆ.

ಆಂಡ್ರೂ ಕ್ರ್ಯೂಸ್‌ (94) ಅವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಂಡ್ರೂ ಕ್ರ್ಯೂಸ್‌ ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್‌ ನೇತೃತ್ವದಲ್ಲಿ ರೂಪೇಶ್‌ ಬಾವಿಗೆ ಇಳಿದು ಕಾರ್ಯಾಚರಣೆ ಕೈಗೊಂಡಿದ್ದು, ಸಿಬ್ಬಂದಿ ದಿನೇಶ್‌, ಸುರೇಶ್‌, ಗಣೇಶ್‌, ನಿತ್ಯಾನಂದ, ಮುಜಾಂಬಿಲ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

















































error: Content is protected !!
Scroll to Top