​ನೀರಿನ ಟ್ಯಾಂಕ್‌ಗೆ ಬಿದ್ದ ಮೊಬೈಲ್ ತೆಗೆಯಲು ಹೋಗಿ ವ್ಯಕ್ತಿ ಸಾವು

ಹೆಬ್ರಿ : ನೀರಿನ ಟ್ಯಾಂಕ್‌ಗೆ ಬಿದ್ದಿದ್ದ ಮೊಬೈಲ್ ಫೋನ್ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಟ್ಯಾಂಕ್ ಒಳಗೆ ಬಿದ್ದು ​ಇಂದಿರಾನಗರ ನಿವಾಸಿ ಶೇಖರ ನಾಯ್ಕ್‌ (57) ಮೃತಪಟ್ಟಿದ್ದಾರೆ. ಎ. 7ರಂದು ಶೇಖರ ನಾಯ್ಕ್‌ ಅವರು ತಮ್ಮ ಮನೆಯ ಮೇಲಿನ ನೀರಿನ ಟ್ಯಾಂಕ್‌ನಲ್ಲಿ ನೀರು ಎಷ್ಟಿದೆ ಎಂದು ಇಣುಕಿ ನೋಡಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಮೊಬೈಲ್ ಫೋನ್ ಆಕಸ್ಮಿಕವಾಗಿ ಟ್ಯಾಂಕ್‌ನೊಳಗೆ ಬಿದ್ದಿದೆ. ಬಿದ್ದ ಫೋನ್‌ ಹೊರತೆಗೆಯಲು ಅವರು ಬಾಗಿದಾಗ, ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್‌ನೊಳಗೆ ಮಗುಚಿ ಬಿದ್ದಿದ್ದಾರೆ ಎನ್ನಲಾಗಿದೆ.
​ನೀರಿನಿಂದ ಮೇಲೆ ಬರಲಾಗದೇ ಅವರು ಟ್ಯಾಂಕ್‌ನಲ್ಲೇ ಸಿಲುಕಿಕೊಂಡಿದ್ದರು. ತಕ್ಷಣವೇ ಅವರನ್ನು ಮನೆಯವರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕುರಿತು ಮೃತರ ಪತ್ನಿ ಜಯಂತಿ ನಾಯ್ಕ (47) ಅವರು ನೀಡಿದ ದೂರಿನ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







































error: Content is protected !!
Scroll to Top