ಮಹಿಳೆಯರು ಸಂಘಟಿತರಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು – ಮಂಜುನಾಥ ಮುದ್ರಾಡಿ

ಸಾಂತ್ವನ ಕೇಂದ್ರದ ಸದುಪಯೋಗವಾಗಲಿ – ಉದಯ ಶೆಟ್ಟಿ ಮುನಿಯಾಲು

ಕಾರ್ಕಳ : ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶು ಪಾಲನಾ ಕೇಂದ್ರ ಕಾರ್ಕಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ (5 ಲಕ್ಷ ರೂ.)ಯಿಂದ ನಿರ್ಮಾಣವಾದ ಆಪ್ತ ಸಮಾಲೋಚನಾ ಕಟ್ಟಡದ ಉದ್ಘಾಟನೆಯನ್ನು ಎ. 4ರಂದು ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು. ಆಪ್ತ ಸಮಾಲೋಚನಾ ಕೇಂದ್ರದಿಂದಾಗಿ ಮಹಿಳೆಯರು ಒಂದೆಡೆ ಬೆರೆಯಲು ಅನುಕೂಲವಾಗುವುದು ಎಂದರು.
ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸಾಂತ್ವನ ಕೇಂದ್ರದ ಸದುಪಯೋಗ ಪಡೆದು ಕುಟುಂಬಗಳು ನೆಮ್ಮದಿ ಕಾಣಬೇಕೆಂದರು.

ಸನ್ಮಾನ
ಕಟ್ಟಡದ ಗುತ್ತಿಗೆದಾರ ಗುರುಪ್ರಸಾದ್, ಉದ್ಯಮಿ ಲಕ್ಷ್ಮಣ, ಈಸಿ ಲೈಫ್ ಮ್ಯಾನೇಜರ್ ಕಾರ್ತಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಪರವಾಗಿ ಸೌಮ್ಯ, ಉದ್ಯಮಿ ವಿಜಯ್ ಶೆಟ್ಟಿ ಪರವಾಗಿ ಸವಿತಾ ಶೆಟ್ಟಿ, ಸಾವಿತ್ರಿ ಮನೋಹರ್, ವಸಂತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಸಿಡಿಪಿಒ ಶ್ರೀಲತಾ ಶುಭ ಶುಭಹಾರೈಸಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋಧಾ ಶೆಟ್ಟಿ ಸ್ವಾಗತಿಸಿದರು. ಜಯಂತಿ ಶೆಟ್ಟಿ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಅರುಂಧತಿ ಆಚಾರ್ ವಂದಿಸಿದರು.



































































































error: Content is protected !!
Scroll to Top