ದುಸ್ಸಾಹಸಕ್ಕೆ ಮುಂದಾದ್ರೆ ನಿರ್ಣಾಯಕ ಕ್ರಮ – ರಕ್ಷಣಾ ಸಚಿವರಿಂದ ಪಾಕ್‌ಗೆ ಎಚ್ಚರಿಕೆ

ತಿರುವನಂತಪುರಂ : ಪಾಕಿಸ್ತಾನ ಭಾರತದ ಮೇಲೆ ಯಾವುದೇ ದುಸ್ಸಾಹಸಕ್ಕೆ ಮುಂದಾದರೂ ಅದಕ್ಕೆ ನಿರ್ಣಾಯಕ ಕ್ರಮಕೈಗೊಳ್ಳಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಸೈನಿಕರನ್ನು ಗೌರವಿಸುವ ಸಲುವಾಗಿ ಕೇರಳದ ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾಕಿಸ್ತಾನಕ್ಕೆ ಖಡಕ್‌ ಸಂದೇಶ ನೀಡಿದರು.
ಆಪರೇಷನ್‌ ಸಿಂಧೂರವನ್ನು ಉಲ್ಲೇಖಿಸಿ ಮಾತನಾಡಿದ ರಾಜನಾಥ್‌ ಸಿಂಗ್‌ ಅವರು ಆಪರೇಷನ್‌ ಸಿಂಧೂರದಲ್ಲಿ ಭಾರತದಲ್ಲಿ ಆತಂಕವಾದವನ್ನು ಮಾಡಿದ ಪಾಕಿಸ್ತಾನದ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಪ್ರಸ್ತುತ ಮಧ್ಯಪ್ರಾಚ್ಯ ಸಂಘರ್ಷದ ಸಮಯವನ್ನು ಲಾಭವಾಗಿ ಪಡೆದುಕೊಂಡು ದೇಶದ ಮೇಲೆ ಯಾವುದೇ ದುಸ್ಸಾಹಸಕ್ಕೆ ಮುಂದಾಗಬಹುದು. ಆದರೆ, ಹಾಗೇನಾದರೂ ಮಾಡಿದರೆ, ಭಾರತದ ಪ್ರತಿಕ್ರಿಯೆ ನಿರ್ಣಾಯಕವಾಗಿರಲಿದೆ ಎಂದು ಎಚ್ಚರಿಸಿದ್ದಾರೆ.









































































































error: Content is protected !!
Scroll to Top