ಮಂಜುನಾಥ ಮುದ್ರಾಡಿ ಅವರಿಗೆ ಸಚಿವ ಸ್ಥಾನಮಾನ

ಬೆಂಗಳೂರು : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ‍್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ದೊರೆತಿದೆ. ಈ ಕುರಿತು ಎ. 2ರಂದು ಸರಕಾರ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.
2025 ಸೆಪ್ಟೆಂಬರ್‌ನಲ್ಲಿ ನೂತನವಾಗಿ ರಚಿಸಲಾಗಿರುವ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಹಿರಿಯ ಕಾಂಗ್ರೆಸ್‌ ಮುಖಂಡ, ಹೆಬ್ರಿ ತಾಲೂಕು ಮುದ್ರಾಡಿಯ ಮಂಜುನಾಥ ಪೂಜಾರಿ ಅವರನ್ನು ಸರಕಾರ ನೇಮಕ ಮಾಡಿದ್ದು, ಇದೀಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದೆ.
ಕಳೆದ 3 ದಶಕಗಳಿಂದ ನಿರಂತರವಾಗಿ ಪಕ್ಷದ ಕಾರ್ಯ ಮಾಡಿಕೊಂಡು ಬಂದಿರುವ ಮಂಜುನಾಥ ಪೂಜಾರಿ ಅವರು ಡೀಮ್ಡ್‌ ಫಾರೆಸ್ಟ್‌ ಕುರಿತಾಗಿ ಜನಪರ ಹೋರಾಟ ಮಾಡಿಕೊಂಡು ಬಂದವರಾಗಿದ್ದರು. ಗ್ರಾಮೀಣ ಭಾಗದ ಜನರ ಸಹಾಯಕ್ಕಾಗಿ ಸಹಕಾರಿ ಸಂಘ ಸ್ಥಾಪಿಸಿದ್ದರು. ರಾಜಕೀಯ ಕ್ಷೇತ್ರ ಮಾತ್ರವಲ್ಲದೇ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಮಂಜುನಾಥ ಪೂಜಾರಿ ಅವರು ಎರಡು ಅವಧಿಗೆ ಮುದ್ರಾಡಿ ಗ್ರಾಮ ಪಂಚಾಯತ್‌ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಅನಂತರ ಅ‍ಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು. ತಾಲೂಕು ಬೋರ್ಡ್‌, ಜಿ.ಪಂ. ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅವರದ್ದು. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ, ಹೆಬ್ರಿ ತಾಲೂಕು ರಚನೆಗಾಗಿ ನಡೆದ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಅವರು ಹೆಬ್ರಿ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.









































































































error: Content is protected !!
Scroll to Top