ರಾಷ್ಟ್ರೀಯ ವ್ಯವಹಾರ ವಿಭಾಗದ ಸಂಯೋಜಕರಾಗಿ ಸುಧಾಕರ್ ಪೂಜಾರಿ

ಕಾರ್ಕಳ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ವ್ಯವಹಾರ ವಿಭಾಗದ ಸಂಯೋಜಕರಾಗಿ ಕಾರ್ಕಳದ ಸುಧಾಕರ್ ಪೂಜಾರಿ ಆಯ್ಕೆಯಾಗಿದ್ದಾರೆ. ಸುಧಾಕರ್ ಪೂಜಾರಿ ಅವರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಾರ್ಕಳ ರಾಕ್ ಸಿಟಿಯ ಸ್ಥಾಪಕ ಅಧ್ಯಕ್ಷರಾಗಿದ್ದು, ಜೇಸಿ ಸಂಸ್ಥೆಯ ಪೂರ್ವ ವಲಯ ಅಧಿಕಾರಿ ಹಾಗೂ ರಾಷ್ಟ್ರೀಯ ತರಬೇತಿದಾರರಾಗಿದ್ದಾರೆ.
ಕಳೆದ 22 ವರ್ಷಗಳಿಂದ ಜೇಸಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಎಕ್ಕಾರ ಲೈಫ್ ಸೆನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ ಹಾಗೂ ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ (ಜೋಡುಕಟ್ಟೆ, ಕಾರ್ಕಳ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ವಾಹಿನಿ ಕಾರ್ಕಳ ಘಟಕದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ತರಬೇತಿದಾರರಾಗಿರುವ ಅವರು ದೇಶದ ವಿವಿಧ ಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ತರಬೇತಿ ಕಾರ್ಯಾಗಾರ ನಡೆಸಿರುತ್ತಾರೆ. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತರಬೇತಿದಾರರಿಗಾಗಿ ವಿಶೇಷ ಪಠ್ಯವನ್ನು ತಯಾರಿಸಿ ತರಬೇತಿ ನೀಡಿರುವುದು ವಿಶೇಷವಾಗಿದೆ. ಈ ಎಲ್ಲ ಸಾಧನೆ ಪರಿಗಣಿಸಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಾಸುದೇವನ್ ಅವರು ಸುಧಾಕರ್‌ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ ಮಾಡಿರುತ್ತಾರೆ.









































































































error: Content is protected !!
Scroll to Top