ಟೆಂಪೋ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸಾವು

ಕಾರ್ಕಳ : ಟೆಂಪೋ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸಾವನಪ್ಪಿದ ದುರ್ಘಟನೆ ಮಾ. 29ರಂದು ಸಾಣೂರಿನಲ್ಲಿ ನಡೆದಿದೆ. ಕೆರ್ವಾಶೆಯ ಜಯಾನಂದ ಶೆಟ್ಟಿ ಮೃತ ದುರ್ದೈವಿ. ಇವರು ಸಾಣೂರಿನಿಂದ ಕಾರ್ಕಳ ಕಡೆಗೆ ಸ್ಕೂಟರ್‌ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಚಿಲಿಂಬಿ ಕಡೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಟೆಂಪೋ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಜಯಾನಂದ ಶೆಟ್ಟಿಯವರನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರಲ್ಲಿ ತೋರಿಸಿದಾಗ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































error: Content is protected !!
Scroll to Top