ಮದುವೆಯಾದ ಒಂದೇ ತಿಂಗಳಲ್ಲಿ ಉದ್ಯಮಿ ಸಾವು

ಕಾರ್ಕಳ : ಕಳೆದ ತಿಂಗಳು ಮದುವೆಯಾಗಿದ್ದ ಉದ್ಯಮಿ ಮಾ.17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದವರು ಚಿಕಿತ್ಸೆ ಫಲಿಸದೆ ಮಾ.29 ರಂದು ಬೆಳಗ್ಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುದೀಪ್‌ನ ತಂದೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸುದೀಪ್‌ನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಆತ್ಮಹತ್ಯೆ ಪ್ರಚೋದಿಸಿರುವುದಾಗಿ ದೂರು ನೀಡಿದ್ದಾರೆ.

ಪ್ರಕರಣ
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಬಿ.ಸುದೀಪ್ ರೈ (36) ಫೆ. 17ರಂದು ಪುತ್ತೂರು ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಮದುವೆಯಾಗಿದ್ದು, ಆ ಬಳಿಕ ಸುದೀಪ್‌ ಮತ್ತು ಸೌಮ್ಯಳು ಕಾರ್ಕಳ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆಯಲ್ಲಿ ವಾಸವಾಗಿದ್ದರು. ಮಾ. 17ರಂದು ಸುದೀಪ್‌ ತಂದೆ -ತಾಯಿ ಮನೆಯಾದ ಪುತ್ತೂರು ತಾಲೂಕಿನ ನೆಲ್ಯಾಡಿಗೆ ಹೋಗಿದ್ದು ಈ ವೇಳೆ ಅವರ ತಾಯಿಯೊಂದಿಗೆ ಪೂಜಾ ಕಾರ್ಯಕ್ಕಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಆಪಾದಿತೆ ಸೌಮ್ಯ ಶೆಟ್ಟಿ ಸ್ಕೂಟಿಯಲ್ಲಿ ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾಳೆ. ಆಗ ಸುದೀಪನು ಆಪಾದಿತಳೊಂದಿಗೆ ಕಾರ್ಕಳಕ್ಕೆ ಬಂದಿರುತ್ತಾರೆ. ಮಾ. 22ರಂದು ಸೌಮ್ಯಳ ಸಂಬಂಧಿಕರು ಸುದೀಪ್‌ನ ಸಂಬಂಧಿಕರಿಗೆ ಕರೆ ಮಾಡಿ ಸುದೀಪನು ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು, ಚಿಕಿತ್ಸೆಗಾಗಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿದ್ದರು. ನಂತರ ಸುದೀಪ್‌ನ ತಾಯಿ ಮಾ. 23ರಂದು ಗಾಜ್ರಿಯಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಮಾ. 24ರಂದು ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮಾ. 29ರಂದು ಚಿಕಿತ್ಸೆ ಫಲಕಾರಿಯಾಗದೆ ಸುದೀಪ್‌ ಮೃತಪಟ್ಟಿದ್ದಾರೆ. ಈ ಬಗ್ಗೆ ಸುದೀಪನ ತಂದೆ ಬಿ.ದಾಮೋದರ ಅವರು ಸೌಮ್ಯಳು ಸುದೀಪನಿಗೆ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ದೂರು ನೀಡಿದ್ದಾರೆ.

ಸೌಮ್ಯ ಶೆಟ್ಟಿ ನಾಟಕ ಕಲಾವಿದೆಯಾಗಿದ್ದು, ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ಮೊದಲು ಮದುವೆಯಾಗಿದ್ದು ಡಿವೋರ್ಸ್ ಪಡೆದಿದ್ದಾರೆ. ಅದಲ್ಲದೆ ಆ ಬಳಿಕ ಬೇರೆಯವರೊಂದಿಗೆ ಮದುವೆ ಸಂಬಂಧ ಮಾತುಕತೆ ಆಗುತ್ತಿತ್ತು ಎಂದು ತಿಳಿದುಬಂದಿದೆ.

































































































error: Content is protected !!
Scroll to Top