ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ,ಅಲ್ಲಮಪ್ರಭು ಪೀಠ ಕಾಂತಾವರ ಜಂಟಿಯಾಗಿ ಹೋಟೆಲ್ ಪ್ರಕಾಶದಲ್ಲಿ ಆಯೋಜಿಸಿದ ಮಹಾಭಾರತ ಭಾವದೀಪ ವರ್ಷ ಪೂರ್ತಿ ಮಹಾಭಾರತ ಉಪನ್ಯಾಸ ಮಾಲಿಕೆಯ ತೃತೀಯ ಸೋಪಾನ ಕುರುವಂಶದ ರಾಜ ಕುವರರು ಎಂಬ ವಿಷಯದ ಕುರಿತು ವಿದ್ವಾಂಸ ಡಾ. ವಿನಾಯಕ ಭಟ್ ಗಾಳಿಮನೆ ಉಪನ್ಯಾಸ ನೀಡಿದರು. ಭಗವಂತನು ಜನನ- ಮರಣವನ್ನು ಅವನ ಕೈಯಲ್ಲಿಟ್ಟುಕೊಂಡು, ಬದುಕನ್ನು ನಮ್ಮ ಕೈಯಲ್ಲಿಟ್ಟನು. ತ್ಯಾಗ -ಭೋಗದ ಸಮನ್ವಿತ ಬದುಕು ಯೋಗದ ಬದುಕಾಗುತ್ತದೆ ಎಂದವರು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿದರು. ಮಾಲತಿ ವಸಂತ್ ರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಲೋಚನ ಬಿ.ವಿ. ವಂದಿಸಿದರು.
ಮಹಾಭಾರತ ಉಪನ್ಯಾಸ ಮಾಲಿಕೆ – ಕುರುವಂಶದ ರಾಜ ಕುವರರು : ಉಪನ್ಯಾಸ



























