ಬೆಂಗಳೂರು : ಕಾಂಗ್ರೆಸ್ ಶಾಸಕ ಉದಯ್ ಕದಲೂರ್ ಅವರು ಸದನದಲ್ಲಿ ಅನುದಾನಕ್ಕೆ ಬೇಡಿಕೆಯಿಟ್ಟು, ಅನುದಾನವಿಲ್ಲದೇ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಸದನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮದ್ದೂರು ಶಾಸಕ ಉದಯ್ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಾಕಿ ಇದೆ. ಮದ್ದೂರಿನಲ್ಲಿ ಎಸ್‌ಸಿ ವರ್ಗದ ಜನ ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಬೇಕು ಎಂದು ಆಗ್ರಹಿಸಿದರು. ನಮಗೆ ಅನುದಾನ ಕೇಳಿ ಕೇಳಿ ಸಾಕಾಗಿದೆ. ಕಾಲಮಿತಿಯೊಳಗೆ ಅನುದಾನ ಕೊಡಿ ಎಂದು ಮದ್ದೂರು ಶಾಸಕ ಉದಯ್ ಅಳಲು ತೋಡಿಕೊಂಡರು.
ಅನುದಾನ ಕೇಳಿ ಕೇಳಿ ಸಾಕಾಗಿದೆ – ಸದನದಲ್ಲಿ ಅಳಲು ತೋಡಿಕೊಂಡ ಕಾಂಗ್ರೆಸ್ ಶಾಸಕ



























