ಜಕಾರ್ತ ಪ್ರೀಮಿಯರ್‌ ಲೀಗ್‌ – ಹೊಸ್ಮಾರು ಸುಧಾಕರ್‌ ಶೆಟ್ಟಿ ಮಾಲಿಕತ್ವದ ತಂಡ ಪ್ರಥಮ

ಬಾಲಿ : ಇಂಡೋನೇಷ್ಯಾದಲ್ಲಿ ನಡೆದ ಜಕಾರ್ತ ಪ್ರೀಮಿಯರ್ ಲೀಗ್ ನಲ್ಲಿ ಹೊಸ್ಮಾರು ಸುಧಾಕರ್ ಶೆಟ್ಟಿ ಅವರ ಮಾಲಿಕತ್ವದ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಡೋನೇಷ್ಯಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅಗುಸ್, ರಾಮ, ಧೋನಿ, ಮ್ಯಾಕ್ಸಿ, ಧನೇಶ್, ಸಂಪತ್, ಕಿರುಬ, ಪದ್ಮಾಕರ ಸುರ್ವೆ ಉಡುಪಿ ಕೋಸ್ಟಲ್ ಕ್ರಿಕೆಟ್ ತಂಡದಲ್ಲಿದ್ದರು.
ಜಕರ್ತ ಪ್ರಿಮಿಯರ್ ಲೀಗ್ ಎಂಟು ತಿಂಗಳ ಕಾಲ ಸುದೀರ್ಘವಾಗಿ ನಡೆಯುತ್ತಿದ್ದು ಈ ಬಾರಿ 13 ತಂಡಗಳಿದ್ದವು. ಸತತ ಎರಡನೆಯ ಬಾರಿಗೆ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿದೆ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ಕೋಸ್ಟಲ್ ತಂಡ 30 ಓವರ್ ನಲ್ಲಿ 190 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್‌ ಮಾಡಿದ ಸ್ಡಾಮ್‌ ರುಸನಾ ಕ್ರಿಕೆಟ್ ಕ್ಲಬ್ 93 ರನ್ ಗಳಿಸಲಷ್ಟೇ ಶಕ್ತವಾಯಿತು.







































































































error: Content is protected !!
Scroll to Top