ಕುವೆಂಪು ಮನೆ ಮಾರುವ ಉದ್ದೇಶವಿಲ್ಲ : ನಾವೇ ವಸ್ತುಸಂಗ್ರಹಾಲಯವಾಗಿ ರೂಪಿಸುತ್ತೇವೆ – ಕುಟುಂಬದಿಂದ ಸ್ಪಷ್ಟನೆ

ಮೈಸೂರು : ರಾಷ್ಟ್ರಕವಿ ಕುವೆಂಪು ಅವರು ವಾಸಿಸುತ್ತಿದ್ದ ಮನೆ ವಿವಿಪುರಂನ ಉದಯರವಿ ಮನೆಯನ್ನು ಮಾರುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ಅದನ್ನು ನಾವೇ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುತ್ತೇವೆ ಎಂದು ಕುವೆಂಪು ಅವರ ಕುಟುಂಬ ತಿಳಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕುವೆಂಪು ಅವರ ಅಳಿಯ, ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ, ಕುವೆಂಪು ಅವರು 60 ವರ್ಷ ಬಾಳಿದ ಹಾಗೂ ಅವರ ಬಹುತೇಕ ಕೃತಿಗಳು ರಚನೆಯಾದ ಸ್ಥಳವೇ ಉದಯರವಿ ಮನೆ. ಕೆಲವು ವರ್ಷಗಳ ಹಿಂದೆ ಆ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಮಾಡಬೇಕೆಂಬ ಪ್ರಯತ್ನ ಸರಕಾರದಿಂದ ನಡೆಯಿತಾದರೂ ಕಾರಣಾಂತರಗಳಿಂದ ಅದು ಕಾರ್ಯಗತವಾಗಲಿಲ್ಲ ಎಂದವರು ತಿಳಿಸಿದರು.
ಕನ್ನಡಿಗರ ಅಪೇಕ್ಷೆಯಂತೆ ನಾವೇ ಮ್ಯೂಸಿಯಂ ಆಗಿಸಲು ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದೇವೆ. ಈ ಮನೆಯ ದುರಸ್ತಿ ಕಾರ್ಯವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಈ ಮನೆಯನ್ನು ಮಾರುವ ಉದ್ದೇಶ ನಮಗಿಲ್ಲ. ಹೀಗಿರುವಾಗ, ಹಣಕಾಸಿನ ವಿಷಯ ಇಲ್ಲಿ ಅಪ್ರಸ್ತುತ ಎಂದು ಚಿದಾನಂದ ಅವರು ತಿಳಿಸಿದರು.





























































































































error: Content is protected !!
Scroll to Top