ನೆರವಿನ ನಿರೀಕ್ಷೆಯಲ್ಲಿ ನೊಂದ ಕುಟುಂಬ
ಅದೊಂದು ದಿನ ಸಂಬಂಧಿಕರ ಮದುವೆಗೆಂದು ಸಂಭ್ರಮದಿಂದ ಹೊರಟ್ಟಿದ್ದರು ದಂಪತಿ. ಮದುವೆ ಸಭಾಂಗಣಕ್ಕೆ ತಲುಪಬೇಕಾಗಿದ್ದ ದಂಪತಿ ಸೇರಿದ್ದು ಮಾತ್ರ ಆಸ್ಪತ್ರೆಗೆ. ಮದುವೆ ಸಂಭ್ರಮವನ್ನು ನುಚ್ಚುನೂರು ಮಾಡಿದ್ದು ಕಾರು ಅಪಘಾತ. ನ. 13ರ ಬೆಳಿಗ್ಗೆ ನಿಟ್ಟೆ ಗ್ರಾಮದ ಕಲಂಬಾಡಿ ಪದವಿನ ಜಗದೀಶ್ ಆಚಾರ್ಯ (39) ಹಾಗೂ ಅವರ ಪತ್ನಿ ಐಶ್ವರ್ಯ (28) ದಂಪತಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಕಲಂಬಾಡಿಯಿಂದ ಏಳಿಂಜೆಗೆ ಹೋಗುತ್ತಿದ್ದಾಗ ಬೆಳ್ಮಣ್ ದ್ವಾರದ ಹತ್ತಿರ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಕಾರೊಂದು ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಜಗದೀಶ್ ಆಚಾರ್ಯ ಹಾಗೂ ಅವರ ಪತ್ನಿ ರಸ್ತೆಗೆಸೆಯಲ್ಪಟ್ಟು ತೀವ್ರ ಸ್ವರೂಪದಿಂದ ಗಾಯಗೊಂಡಿದ್ದರು. ಜಗದೀಶ್ ಅವರ ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಬಲವಾದ ಹೊಡೆತ ಬಿದ್ದ ಪರಿಣಾಮ ಎದ್ದೇಳಲಾರದಂತೆ ಆಯಿತು. ಅವರ ಪತ್ನಿ ಐಶ್ವರ್ಯ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಸಂಪೂರ್ಣ ದೇಹದ ಸ್ವಾಧೀನ ಕಳೆದುಕೊಳ್ಳುವಂತಾಯಿತು. ಇದೀಗ ಆ ದಂಪತಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 20 ದಿನದಿಂದ ಚಿಕಿತ್ಸೆ ನಡೆಯುತ್ತಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇಬ್ಬರೂ ಗುಣಮುಖರಾಗಲು ವರ್ಷನೇ ಬೇಕಾಗಬಹುದು. ಈಗಾಗಲೇ ಆಸ್ಪತ್ರೆ ಬಿಲ್ 12 ಲಕ್ಷ ರೂ. ದಾಟಿದೆ. ಆ ಮೊತ್ತವನ್ನು ಸ್ನೇಹಿತರು, ಸಂಬಂಧಿಕರು ಒಟ್ಟು ಸೇರಿಸಿ ಭರಿಸಿದ್ದಾರೆ.

20 ಲಕ್ಷ ರೂ. ಅವಶ್ಯ
ಚಿಕಿತ್ಸೆಯ ವೆಚ್ಚಕ್ಕಾಗಿ ಬಳಿಕ ಜೀವನ ನಿರ್ವಹಣೆಗಾಗಿ ಸುಮಾರು 20 ಲಕ್ಷ ರೂ. ವಿನ ಅವಶ್ಯಕತೆ ಆ ಬಡ ಕುಟುಂಬಕ್ಕಿದೆ. ಒಂದು ಕಡೆ ಆಸ್ಪತ್ರೆಯಲ್ಲಿದ್ದು ಕಂಗಾಲಾಗಿರುವ ಆ ಕುಟುಂಬ ಮತ್ತೊಂದೆಡೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಸಹೃದಯಿ ದಾನಿಗಳು ಜಗದೀಶ್ ದಂಪತಿ ನೋವಿಗೆ ಸ್ಪಂದಿಸಬೇಕಿದೆ. ಆರ್ಥಿಕ ಸಹಕಾರ ನೀಡಿ ಜಗದೀಶ್ ಹಾಗೂ ಐಶ್ವರ್ಯ ಬಾಳಿಗೆ ಬೆಳಕಾಗಬೇಕಿದೆ. ಎರಡು ಜೀವಗಳು ಮತ್ತೆ ನೆಮ್ಮದಿಯ ಜೀವನ ನಡೆಸುವಂತಾಗುವಲ್ಲಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಬಡ ಕುಟಂಬ.
ನೆರವು ನೀಡಲಿಚ್ಚಿಸುವವರು
ಖಾತೆ ಸಂಖ್ಯೆ : 084101000007563
ಐಎಫ್‌ಎಸ್‌ಸಿ : IOBA0000841
ಜಗದೀಶ್ ಆಚಾರ್ಯ ಮೊ. 9591887682





































