ಕಾರ್ಕಳ : ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನು ಶ್ರೀಮಂತಗೊಳಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮಹೋತ್ಸವ ಕ್ರಿಯೇಟಿವ್ ಆವಿರ್ಭವ–2025 ಡಿ.4, 5, 6 ರಂದು ವೈಭವದೊಂದಿಗೆ ನಡೆಯಲಿದೆ. ಈ ಮೂರು ದಿನಗಳ ಸಂಭ್ರಮವು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ವಿವಿಧ ಸಾಂಸ್ಕೃತಿಕ, ವಿದ್ಯಾಭ್ಯಾಸಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಡಿ. 4ರಂದು ಸಂಜೆ 6.00 ಗಂಟೆಗೆ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಕರಾವಳಿಯ ಸಾಂಪ್ರದಾಯಿಕ ಕಲಾ ವೈಭವ, ಯಕ್ಷಗಾನ, ನೃತ್ಯ, ನಾಟಕ ಹಾಗೂ ಜಾನಪದ ಕಲಾಪ್ರದರ್ಶನಗಳು ಮುಖ್ಯ ಆಕರ್ಷಣೆಯಾಗಿವೆ. ಡಿ. 5ರಂದು ಮಧ್ಯಾಹ್ನ 2.30 ರಿಂದ ವಿವಿಧ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಹಾಗೂ ವಿಶೇಷ ಅತಿಥಿ ಉಪನ್ಯಾಸಗಳು ನಡೆಯಲಿವೆ. ಡಿ.6ರಂದು 6 ಬೆಳಗ್ಗೆ 10.30ಕ್ಕೆ ಸಾಧಕರಿಗೆ ಗೌರವ ಸಮರ್ಪಣೆ, ಸನ್ಮಾನ್ಯ ಅತಿಥಿಗಳಿಂದ ಸಂದೇಶಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾವಿರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.
4ರಂದು ಸಂಜೆ 6.00ರಿಂದ ಕ್ರಿಯೇಟಿವ್ ಯಕ್ಷಾರಾಧನಮ್, ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ. ಶ್ರೀರಾಮಾನುಗ್ರಹ ಸಿಂದೂರ ವಿಜಯ
5ರಂದು ಅಪರಾಹ್ನ 2:30 ರಿಂದ ದಿ. ಎಚ್. ಎಸ್ ವೆಂಕಟೇಶಮೂರ್ತಿಯವರ ಕುರಿತು ಭಾವ ನಮನ ಕಾರ್ಯಕ್ರಮ. ಸಂಜೆ 7.00ರಿಂದ ಮ್ಯಾಜಿಕ್ ಶೋ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ 6ರಂದು ಅಪರಾಹ್ನ 12.15 ರಿಂದ ಕ್ರಿಯೇಟಿವ್ ಸಾಹಿತ್ಯಸಾಂಗತ್ಯ ಸಂವಾದ, ಮಾತು ಕ(ವಿ)ತೆ ಚುಟುಕುಬ್ರಹ್ಮ ಎಚ್. ಡುಂಡಿರಾಜ್ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರು ಅವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ವಾರ್ಷಿಕೋತ್ಸವ ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಸರ್ಕಾರ ಮಾಜಿ ಮುಖ್ಯಮಂತ್ರಿಗಳು, ವೀರಪ್ಪ ಮೊಯ್ಲಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು, ವಿ. ಸುನಿಲ್ ಕುಮಾರ್, ಮಣಿಪಾಲ ವಿ.ವಿ.ಯ ಪ್ರೊ. ಚಾನ್ಸಲರ್, ಆಡಳಿತಗಾರರು, ರೇಡಿಯೋಲಜಿ ತಜ್ಞರು ಹಾಗೂ ಅಧ್ಯಕ್ಷರು, ಡಾ. ಎಚ್.ಎಸ್. ಬಲ್ಲಾಳ್, ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಮುನಿಯಾಲು ಸಂಜೀವಿನಿ ಗೋಧಾಮದ ಸ್ಥಾಪಕರು, ಡಾ. ಜಿ. ರಾಮಕೃಷ್ಣ ಆಚಾರ್, ವಿಶ್ರಾಂತ ಪ್ರಾಚಾರ್ಯರು, ಮಿಯ್ಯಾರು ಕಂಬಳ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ. ಗುಣಪಾಲ್ ಕಡಂಬ, ಸು ಫ್ರಮ್ ಸೋ ಖ್ಯಾತಿಯ ನಟರು ಶನಿಲ್ ಗೌತಮ್ ಉಪಸ್ಥಿತರಿರಲಿದ್ದಾರೆ. ಈ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಬ್ಬಕ್ಕೆ ಎಲ್ಲಾ ನಾಗರಿಕರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.






































