ಸಿಎಸ್-ಇಇಟಿ ಪರೀಕ್ಷೆ : ಕ್ರೈಸ್ಟ್‌ಕಿಂಗ್‌ನ 7 ವಿದ್ಯಾರ್ಥಿಗಳು ಉತ್ತೀರ್ಣ

ಕಾರ್ಕಳ : ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು ನಡೆಸಿದ ರಾಷ್ಟ್ರ ಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ-2025 (ಸಿಎಸ್‌ಇಇಟಿ)ರಲ್ಲಿ ಕ್ರೆಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಿಂದ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಏಳು ವಿದ್ಯಾರ್ಥಿಗಳು ಉತ್ತೀರ್ಣದ್ದಾರೆ. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಜೇಡನ್ ಕುವೆಲ್ಲೊ (171/200), ಜಿತೇಶ್ ಪಿಂಟೊ (147/200), ಸಿಯಾ ಕ್ಯಾರೊಲ್ ಡಿಕ್ರೂಸ್(123/200), ಮಹಿಪಾಲ್ ಸಿಂಗ್(119/200) ಸ್ವಸ್ತಿಕ್ ಎಸ್. ಪೂಜಾರಿ (118/200), ನಿರಾಲಿ ಜೈನ್ (100/200), ಶ್ರಾವ್ಯ (100/200) ಉತ್ತೀರ್ಣರಾದ ವಿದ್ಯಾರ್ಥಿಗಳು. ಈ ಎಲ್ಲಾ ವಿದ್ಯಾರ್ಥಿಗಳು ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ ಸಿಎ ಮತ್ತು ಸಿಎಸ್ ತರಬೇತಿ ತಂಡದಿಂದ ತರಬೇತಿಯನ್ನು ಪಡೆದುಕೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

































































































error: Content is protected !!
Scroll to Top