ಕ್ವೀನ್ಸ್ ಲ್ಯಾಂಡ್ : 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 48 ರನ್ ಗಳ ಜಯ ದಾಖಲಿಸಿದೆ. ಸ್ಪಿನ್ನರ್‌ಗಳಾದ ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ಮಧ್ಯಮ ವೇಗಿ ಶಿವಂ ದುಬೆ ಉತ್ತಮವಾಗಿ ಬೌಲಿಂಗ್ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಆಸ್ಟ್ರೇಲಿಯಾ ತಂಡ 18.2 ಓವರ್ ಗಳಲ್ಲಿ 119 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಭಾರತದ ಪರ ಶುಭಮನ್ ಗಿಲ್ 46 (39), ಅಭಿಷೇಕ್ ಶರ್ಮಾ 28 (21), ಆ್ಯಡಂ ಝಂಪಾ 45ಕ್ಕೆ 3, ನೇಥನ್ ಎಲ್ಲಿಸ್ 21ಕ್ಕೆ 3, ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಶ್ 30 (24), ಮ್ಯಾಥ್ಯೂ ಶಾರ್ಟ್ 25 (19), ಸ್ಟಯೋನಿಸ್ 17(19), ವಾಶಿಂಗ್ಟನ್ 3ಕ್ಕೆ 3, ಶಿವಂ ದುಬೆ 20ಕ್ಕೆ 2 ವಿಕೆಟ್ ಪಡೆದರು.
4ನೇ ಟಿ 20 : ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ
























