ಮಳೆಯಿಂದಾಗಿ ಭಾರತ-ಆಸೀಸ್‌ ಮೊದಲ ಟಿ20 ಪಂದ್ಯ ರದ್ದು

ಕ್ಯಾನ್‌ಬೆರಾ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡನೇ ಪಂದ್ಯ ಅ.31, ಶುಕ್ರವಾರದಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

ಪಂದ್ಯಕ್ಕೂ ಮುನ್ನವೇ ಹವಾವಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು. ಅದರಂತೆ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 9.4 ಓವರ್‌ಗೆ ಒಂದು ವಿಕೆಟ್‌ ಕಳೆದುಕೊಂಡು 97 ರನ್‌ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಒಂದು ಹಂತದಲ್ಲಿ ಮಳೆ ನಿಲ್ಲುವ ಸೂಚನೆ ನೀಡಿದಾಗ ಪಂದ್ಯವನ್ನು 18 ಓವರ್‌ಗೆ ಕಡಿತ ಮಾಡುವ ಮೂಲಕ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಆದರೆ ಮತ್ತೆ ಮಳೆ ಆರ್ಭಟ ಜೋರಾದ ಕಾರಣ ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.

ಭಾರತದ ಪರ ಆರಂಭಿಕ ಅಭಿಷೇಕ್‌ ಶರ್ಮಾ 19 ರನ್‌ ಗಳಿಸಿ ಔಟಾದ್ರೆ, ನಾಯಕ ಸೂರ್ಯಕುಮಾರ್‌ ಯಾದವ್‌ 39 ರನ್‌ (24 ಎಸೆತ, 2 ಸಿಕ್ಸರ, 3 ಬೌಂಡರಿ), ಶುಭಮನ್‌ ಗಿಲ್‌ 37 ರನ್‌ (20 ಎಸೆತ, 1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅಜೇಯರಾಗುಳಿದರು.





























































































error: Content is protected !!
Scroll to Top