ಮೂರ್ತೆದಾರರ ಸೇವಾ ಸಹಕಾರಿ ಸಂಘ ಕಲ್ಯಾ – ವಾರ್ಷಿಕ ಮಹಾಸಭೆ

ಕಾರ್ಕಳ : ಮೂರ್ತೆದಾರರ ಸೇವಾ ಸಹಕಾರಿ ಸಂಘ ಕಲ್ಯಾ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 20ರಂದು ಸಂಘದ ಆವರಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಸುಧಾಕರ್ ಎನ್. ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಸುಂದರ್ ಜೆ.ಅಂಚನ್ ನಿಟ್ಟೆ, ಜಯ ಪೂಜಾರಿ ಪಳ್ಳಿ ಹಾಗೂ ಸಂಘದಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿದ ಗ್ರಾಹಕರಾದ ಅಶೋಕ್ ಎಸ್. ಪೂಜಾರಿ ಕಲ್ಯಾ, ಕೃಷ್ಣ ಆಚಾರ್ಯ ನಿಟ್ಟೆ ಮತ್ತು ವಿಠ್ಠಲ್ ಶೆಟ್ಟಿ ನಿಟ್ಟೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾಶಿವ ಪೂಜಾರಿ ಕಾಂತಾವರ, ನಿರ್ದೇಶಕರಾದ ಕೃಷ್ಣ ಎಸ್. ಪೂಜಾರಿ ಕಲ್ಯಾ, ಕರುಣಾಕರ ಪೂಜಾರಿ ಕಲ್ಯಾ, ಸಂಜೀವ ಪೂಜಾರಿ ಕಲ್ಯಾ, ಸಂಜೀವ ಪೂಜಾರಿ ನಿಟ್ಟೆ, ಸುಂದರ್ ಜೆ. ಅಂಚನ್ ನಿಟ್ಟೆ, ಜಯ ಪೂಜಾರಿ ಪಳ್ಳಿ, ಕೆ. ಪ್ರಕಾಶ್ ಕೋಟ್ಯಾನ್ ಕೆಮ್ಮಣ್ಣು, ರವೀಂದ್ರ ಡಿ. ಪೂಜಾರಿ ನಿಟ್ಟೆ, ರಾಮಚಂದ್ರ ಪೂಜಾರಿ ನಿಟ್ಟೆ, ಶಕುಂತಳ ಬಂಗೇರ ಮಾವಿನಕಟ್ಟೆ, ಪ್ರಶಾಂತ್ ಪೂಜಾರಿ ಕಲ್ಯಾ, ರಘುಪತಿ ಪೂಜಾರಿ ಕಲ್ಯಾ ಹಾಗೂ ಆಂತರಿಕ ಲೆಕ್ಕಪರಿಶೋಧಕ ವಸಂತ್ ಪೂಜಾರಿ ಮಾವಿನಕಟ್ಟೆ ಇವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಿತಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.











































error: Content is protected !!
Scroll to Top