ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಾನಸಿಕ ತಜ್ಞರಲ್ಲಿ ತೋರಿಸಿ – ಸುನಿಲ್ ಕುಮಾರ್ ಅಭಿಮಾನಿ ಬಳಗ

ಕಾರ್ಕಳ : ಹಿಂದೂ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೇಲೆ ನಿರಾಧಾರವಾಗಿ ನಿರಂತರ ಅಪಪ್ರಚಾರ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಬಗ್ಗೆ ಮತ್ತು ಅನಾಮಿಕ ವ್ಯಕ್ತಿ ಮಾಡಿರುವ ಸುಳ್ಳು ಆಪಾದನೆ ಕುರಿತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಸದನದಲ್ಲಿ ಮಾತನಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಶಾಸಕರ ಸದನದ ಭಾಷಣದ ವಿರುದ್ಧ ಹೋರಾಟಗಾರನೆಂದು ಕರೆಸಿಕೊಳ್ಳುವ ಮಹೇಶ್ ಶೆಟ್ಟಿ ತಿಮರೋಡಿ ತೀರಾ ಕೆಳಮಟ್ಟದ ಹೇಳಿಕೆಯನ್ನು ನೀಡಿರುತ್ತಾನೆ. ಅಲ್ಲದೆ ಶಾಸಕರನ್ನು ಏಕವಚನದಲ್ಲಿ ನಿಂದಿಸಿ ಕೊಳಕು ಮಾತುಗಳನ್ನು ಆಡಿರುತ್ತಾನೆ. ಈತನ ಆಪ್ತರು ಈತನನ್ನು ಒಮ್ಮೆ ಮಾನಸಿಕ ತಜ್ಞರಲ್ಲಿ ತೋರಿಸಿದರೆ ಒಳ್ಳೆಯದು ಎಂದು ವಿ. ಸುನಿಲ್ ಕುಮಾರ್ ಅಭಿಮಾನಿ ಬಳಗ ಹೇಳಿದೆ.

ಎಸ್‌ಐಟಿ ತನಿಖೆಯಿಂದ ತನ್ನ ನಿಜರೂಪ ಎಲ್ಲರಿಗೂ ಗೊತ್ತಾಗಿ ಜನರಿಂದ ಧರ್ಮದೇಟು ಬೀಳುವ ಭಯದಿಂದ ಮಹೇಶ್‌ ಶೆಟ್ಟಿ ತಿಮರೋಡಿ ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾನೆ. ಈತನ ಹೇಳಿಕೆ ಖಂಡನೀಯ. ಇನ್ನು ಮುಂದೆ ಇಂತಹ ಮಾತುಗಳನ್ನು ಆಡದೆ ನಾಲಿಗೆಯ ಮೇಲೆ ಲಗಾಮು ಹಾಕಿಕೊಂಡರೆ ಉತ್ತಮ ಇಲ್ಲವಾದರೆ ಮುಂದಕ್ಕೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಅಭಿಮಾನಿ ಬಳಗದ ರೋಹಿತ್ ಶೆಟ್ಟಿ ಮಿಯ್ಯಾರು, ಶೀತಲ್ ಜೈನ್ ಶಿರ್ಲಾಲ್, ಭರತ್ ಕುಮಾರ್ ಇರ್ವತ್ತೂರು, ಯೋಗೀಶ್ ಸಾಲಿಯಾನ್ ಕುಕ್ಕುಂದೂರ್, ವಿಖ್ಯಾತ್‌ ಶೆಟ್ಟಿ, ಪ್ರಕಾಶ್ ಬಲಿಪ ಮಿಯ್ಯಾರು, ನ್ಯಾಯವಾದಿ ಸೂರಜ್ ಕುಮಾರ್ ಹಾಗೂ ಚಿರಂಜೀವಿ ಮರ್ಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top