ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಕಾರ್ಕಳ : ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಎಸ್‌.ಡಿ.ಎಂ.ಸಿ ನೂತನ ಅಧ್ಯಕ್ಷರಾಗಿರುವ ಶ್ರೇಯಾ ಎಸ್. ಜೈನ್ ನೆರವೇರಿಸಿದರು. ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿದಾಸ್ ಭಟ್ ಅವರು ಸೇವಾದಳದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಭಾರತ್ ಸೇವಾದಳದ ಸ್ವಯಂಸೇವಕ ಸೇವಕಿಯರಿಂದ ಪಥ ಸಂಚಲನೆ ನಡೆಯಿತು.

ಮಿಯ್ಯಾರು ಗ್ರಾಮ್ ಪಂಚಾಯತ್‌ ಅಧ್ಯಕ್ಷೆ ಸನ್ಮತಿ ನಾಯಕ್ ಸದಸ್ಯರಾದ ಮೇಬಲ್ ಜೋಯ್ಸ್, ರಾಜೇಶ್ ನೆಲ್ಸನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ನಾಯಕ್ ಮತ್ತು ಕಾರ್ಯದರ್ಶಿ ರಮಕಾಂತ್, ಶಿಕ್ಷಣ ತಜ್ಞ ಶ್ಯಾಮ್ ಎನ್. ಶೆಟ್ಟಿ, ಹಳೆ ವಿದ್ಯಾರ್ಥಿಗಳಾದ ವಿಠಲ ಎಸ್. ಪೂಜಾರಿ, ಸುಂದರ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಾಬು ಪೂಜಾರಿ, ಜುಮ್ಮಾ ಮಸೀದಿಯ ಆಡಳಿತ ಅಧ್ಯಕ್ಷ ಶೇಕ್ ಶಭೀರ್., ಎಸ್‌.ಡಿ.ಎಂ.ಸಿ ಉಪಾಧ್ಯಕ್ಷೆ ಶಾಂತಿ, ನೆಲ್ಲಿಗುಡ್ಡೆ ಫ್ರೆಂಡ್ಸ್ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಮಾಜ ಸೇವಕಿ ಗಾಯತ್ರಿ ಪ್ರಭು ಉಪಸ್ಥಿತರಿದ್ದರು.

ನಿಕಟ ಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಎಸ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸುಜಾತ ಕೆ. ಸ್ವಾಗತಿಸಿ, ಹರೀಶ್‌ ಜಿ.ಕೆ. ಧನ್ಯವಾದವಿತ್ತರು. ಶೋಭ ಕೆ. ನಿರೂಪಿಸಿ, ವಿದ್ಯಾಶ್ರೀ ಮತ್ತು ಶಿಕ್ಷಕಿ ಲಿಲ್ಲಿ ಸಹಕರಿಸಿದರು.









































































































error: Content is protected !!
Scroll to Top