ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಆಗಿ ಶಶಿಧರ್‌ ಜಿ. ಎಸ್.

ಕಾರ್ಕಳ : ಶಶಿಧರ್‌ ಜಿ.ಎಸ್.‌ ‌ ಅವರು ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ (ಆಡಳಿತ) ನೇಮಕಗೊಂಡಿದ್ದಾರೆ. ಮೂಲತ: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರಾದ ಶಶಿಧರ್‌ ಅವರು 1999ರಲ್ಲಿ ಕೆಇಎಸ್‌ ವೃಂದದಲ್ಲಿ ಶಿಕ್ಷಣ ಇಲಾಖೆಗೆ ಆಯ್ಕೆಗೊಂಡು ಆಲೂರು ತಾಲೂಕಿನ ಕದಾಳು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅರಕಲಗೂಡು ತಾಲೂಕಿನ ಬಿ.ಆರ್.ಸಿ. ಕೆಂದ್ರದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯಾಗಿ, ಚಿಕ್ಕಮಗಳೂರು ಡಯಟ್‌ ಹಿರಿಯ ಉಪನ್ಯಾಸಕರಾಗಿ, 2017ರಲ್ಲಿ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, 2019-2021ರ ಅವಧಿಯಲ್ಲಿ ಕಾರ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕಾರಿಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯನಿರ್ವಹಿಸಿದ್ದರು. 2025ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಡಯಟ್‌ ಹಿರಿಯ ಉಪನ್ಯಾಸಕರಾಗಿ ಕರ್ತವ್ಯ ಸಲ್ಲಿಸಿ, ಇದೀಗ ಡಿಡಿಪಿಐ ಆಗಿ ಭಡ್ತಿಗೊಂಡಿರುತ್ತಾರೆ.

ಪುತ್ತೂರು ಬಿಇಒ ಆಗಿ ಕಾರ್ಯನಿರ್ವಹಿಸಿದ್ದ ವೇಳೆ ಕೇಂದ್ರ ಶಿಕ್ಷಣ ಸಚಿವಾಲಯದ ನ್ಯಾಷನಲ್‌ ಯುನಿವರ್ಸಿಟಿ ಆಫ್‌ ಎಜ್ಯುಕೇಶನಲ್‌ ಪ್ಲಾನಿಂಗ್‌ ಆ್ಯಂಡ್ ಅಡ್‌ಮಿನಿಷ್ಟೇಷನ್‌ ಸಂಸ್ಥೆಯಿಂದ ರಾಷ್ಟ್ರಪ್ರಶಸ್ತಿ ಪಡೆದರು.








































































































error: Content is protected !!
Scroll to Top