ಕಾರ್ಕಳದಲ್ಲಿ ಯುವವಾಹಿನಿ ಕೆಸರ್ದ ಕೂಟ

ಕಾರ್ಕಳ : ಮರೆತು ಹೋದಂತಹ ಕೆಸರು ಗದ್ದೆಯ ಕಲ್ಪನೆಗಳನ್ನು ಹಾಗೂ ಮಣ್ಣಿನ ಜೊತೆಗೆ ನಮಗಿರುವ ಬದುಕಿನ ಹೊಂದಾಣಿಕೆಯನ್ನು ಮತ್ತೆ ನೆನಪಿಸಿಕೊಳ್ಳಲು ಕೆಸರಿನ ಕೂಟಗಳು ಒಂದೊಳ್ಳೆ ಅವಕಾಶ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಅವರು ಯುವವಾಹಿನಿ (ರಿ.) ಕೆಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಕಾರ್ಕಳ ಘಟಕದ ಆತಿಥ್ಯದಲ್ಲಿ ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಆ. 3ರಂದು ಸೂರಾಲು ಕಂಬಳ ಗದ್ದೆಯಲ್ಲಿ ನಡೆದ ಯವವಾಹಿನಿ ಕೆಸರ್ದ ಕೂಟ – ಯುವವಾಹಿನಿ ಅಂತರ್‌ ಘಟಕ ಸ್ಪರ್ಧೆಯ ಸಭಾ ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದರು.

ಮನಸ್ಸನ್ನು ಅರಳಿಸುತ್ತದೆ
ಕಂಬಳ, ಮಲ್ಲಯುದ್ಧ, ಕ್ರೀಡಾ ತಾಲೀಮುಗಳ ಮೂಲಕ ಪ್ರಸಿದ್ಧರಾಗಿದ್ದ ಕೋಟಿ ಚೆನ್ನಯರ ಮೂಲ ಯೋಚನೆಯೂ ಮಣ್ಣಿನ ಮೂಲಕ ಬದುಕು ಕಟ್ಟಿಕೊಳ್ಳುವಂತದ್ದಾಗಿತ್ತು ಎಂಬುದು ಸದಾ ಸ್ಮರಣೀಯ. ಹಿಂದೆ ನಮ್ಮ ಬದುಕು ಕೂಡ ಮಣ್ಣಿನ ಜೊತೆ ಲೀನವಾಗಿತ್ತು. ಆದರೆ, ಪ್ರಸ್ತುತ ನಾವೀನ್ಯತೆಗೊಳಗಾಗಿ ಆ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿವೆ. ಇಂತಹ ಸಂದರ್ಭದಲ್ಲಿ ಪ್ರಕೃತಿಯೊಂದಿಗೆ ಜೊತೆಯಾಗಿ ವಿವಿಧ ಕ್ರೀಡಾಕೂಟವನ್ನೊಳಗೊಂಡಿರುವ ಕೆಸರ್‌ದ ಕೂಟ ಜನರ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ. ಇಂದು ಯುವವಾಹಿನಿಯ ಈ ಕ್ರೀಡಾಕೂಟದಲ್ಲಿ ನಮ್ಮ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಹೊಸದೊಂದು ವಾತಾವರಣ ಸೃಷ್ಠಿಯಾಗಿದೆ. ಕ್ರೀಡಾಕೂಟದಲ್ಲಿ ಸಂತೋಷದಿಂದ ಭಾಗವವಹಿಸಿ, ನಾವೆಲ್ಲರೂ ಒಂದೇ ಕುಟುಂಬ ಎಂಬಂತೆ ಸೋಲು ಗೆಲುವನ್ನು ಸಮಚಿತ್ತವಾಗಿ ಸ್ವೀಕರಿಸಿ ಎಂದು ಕೋಟ ಹೇಳಿದರು.

ಪಥಸಂಚಲನ
ಸೂರಲು ಹಿ. ಪ್ರಾ. ಶಾಲಾ ಮೈದಾನದಿಂದ ಪ್ರಾರಂಭಗೊಂಡ ಪಥಸಂಚಲನದಲ್ಲಿ ಯುವವಾಹಿನಿಯ ವಿವಿಧ ಘಟಕಗಳು ಭಾಗವಹಿಸಿದ್ದವು. ಕೃಷಿ ಬದುಕನ್ನು ಪ್ರದರ್ಶಿಸುವ ಉಡುಗೆ ತೊಡುಗೆ ಮತ್ತು ಪ್ರಾತ್ಯಕ್ಷಿತೆಗಳು ಪ್ರಮುಖ ಆಕರ್ಷಣೆಯಾಗಿತ್ತು. ಕೊಂಬು, ವಾದ್ಯ, ಚೆಂಡೆಯೊಂದಿಗೆ ಸೂರಾಲು ಕಂಬಳ ಗದ್ದೆಯವರೆಗೆ ಪಥಸಂಚಲನ ಸಾಗಿ ಬಂದಿತು.

ಹೆಮ್ಮೆಯ ಸಂಸ್ಥೆ – ಪ್ರಮಲ್‌ ಕುಮಾರ್
ಪಥಸಂಚಲನ ಉದ್ಘಾಟಿಸಿದ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌ ಮಾತನಾಡಿ, ಯುವವಾಹಿನಿ ಬಿಲ್ಲವ ಸಮುದಾಯದ ಹೆಮ್ಮೆಯ ಸಂಸ್ಥೆ.‌ ಹತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿರುವ ಪ್ರಚಾರದ ಗೀಳನ್ನು ಬಯಸದ ಯುವವಾಹಿನಿಯ ಕಾರ್ಯಚಟುವಟಿಕೆಗಳು ದೇಶದಾದ್ಯಂತ ಪಸರಲಿ. ಆ ಮೂಲಕ ಮತ್ತಷ್ಟು ಜನತೆಗೆ ಪ್ರೇರಣೆಯಾಗಲಿ ಎಂದ ಅವರು ಯುವವಾಹಿನಿಯ ಕೆಸರ್ದ ಕೂಟದಲ್ಲಿ ಬಿಲ್ಲವರಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶವಿದ್ದರೂ ಎಲ್ಲ ಸಮಾಜ ಬಾಂಧವರನ್ನು ಜೊತೆಯಾಗಿಸಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.

ಬಿಲ್ಲವರ ಕಾರ್ಯವೈಖರಿ ಶ್ಲಾಘನೀಯ – ಉದಯ್‌ ಕುಮಾರ್‌ ಶೆಟ್ಟಿ
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಮಾತನಾಡಿ, ಕೆಸರಿನೊಂದಿಗಿನ ಸಂಬಂಧವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿಯ ನೇತೃತ್ವದಲ್ಲಿ ಕೆಸರ್ದ್‌ ಕೂಟ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಬಿಲ್ಲವ ಸಮುದಾಯ ಸಮಾಜದ ವಿವಿಧ ವ್ಯವ್ಯಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ಇದಕ್ಕೊಂದು ಉದಾಹರಣೆ ಎಂಬಂತೆ ಜಯ ಸಿ. ಸುವರ್ಣ ಅವರಿಂದ ಸ್ಥಾಪಿತವಾದ ಭಾರತ್‌ ಕ್ರೇಡಿಟ್‌ ಕೋ. ಆಪರೇಟಿವ್‌ ಬ್ಯಾಂಕ್‌ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಸಮಾಜದ ವಿವಿಧ ಸ್ತರದ ಜನತೆಯ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ. ಇನ್ನು ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯಲ್ಲಿ ಶಕ್ತಿಯುತವಾಗಿರುವ ಬಿಲ್ಲವ ಸಮುದಾಯ ಕರಾವಳಿಯ ಪ್ರಮುಖ ಧಾರ್ಮಿಕ ಕೇಂದ್ರವಾದ ಗರಡಿಯಲ್ಲಿ ಶೃದ್ಧಾ ಭಕ್ತಿಯಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿದೆ ಎನ್ನಲು ಹೆಮ್ಮಯಾಗುತ್ತದೆ. ಮುಂದೆಯೂ ಬಿಲ್ಲವ ಸಂಘಟನೆಗಳಿಂದ ಸಮಾಜದಲ್ಲಿ ಇಂತಹ ಕಾರ್ಯಗಳು ನಡೆಯಲಿ ಎಂದರು.

ಸನ್ಮಾನ
ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಸುಗಂಧಿ ಉಮೇಶ್‌ ಕಲ್ಮಾಡಿ ಮತ್ತು ರಾಜ್ಯ ಮಟ್ಟದ ವುಶು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಯುವವಾಹಿನಿ(ರಿ.) ಬಜ್ಪೆ ಘಟಕದ ಸದಸ್ಯರಾದ ಸೃಜನ್ ಮತ್ತು ಸೃಜಯ್ ಅವರನ್ನು ಸನ್ಮಾನಿಸಲಾಯಿತು.

ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷೆ ಮಮತಾ ಅಂಚನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೊಕೇಶ್‌ ಕೋಟ್ಯಾನ್‌, ಕೆರ್ವಾಶೆ ಶ್ರೀ ಭವಾನಿ ಶಂಕರ ಕಲಾ ಕೇಂದ್ರದ ಅಧ್ಯಕ್ಷ ಶಶಿಧರ್‌ ಭಟ್‌ ಕೆರ್ವಾಶೆ, ಬಜಗೋಳಿ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್‌ ಪೂಜಾರಿ, ಉದ್ಯಮಿ ಅರುಣ್‌ ಕುಮಾರ್‌ ನಿಟ್ಟೆ, ಕಾರ್ಯಕ್ರಮದ ಸಂಚಾಲಕ ಪ್ರಕಾಶ್ ಪೂಜಾರಿ ಕೆರ್ವಾಶೆ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್‌ ಅಂಚನ್‌, ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ತಾರಾನಾಥ್‌ ಕೋಟ್ಯಾನ್, ಸೂರಾಲು ಗುತ್ತು ಗ್ರಾಮ ಸೇವಾ ಟ್ರಸ್ಟ್‌ ಅಧ್ಯಕ್ಷ ಉಮೇಶ್‌ ಪೂಜಾರಿ, ಅಣ್ಣಿ ಮೂಲ್ಯ, ಉಮೇಶ್‌ ಕುಲಾಲ್‌, ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್‌ ಮೋಹನ್‌, ಕಾರ್ಕಳ ಘಟಕದ ನಿಕಟ ಪೂರ್ವಾಧ್ಯಕ್ಷ ಅರುಣ್‌ ಮಾಂಜ, ಪೂರ್ವಾಧ್ಯಕ್ಷ ಗಣೇಶ್‌ ಸಾಲಿಯಾನ್‌ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ನಿಧಿ ಪ್ರಾರ್ಥಿಸಿದರು. ಯುವವಾಹಿನಿ ಕಾರ್ಕಳ ಘಟಕದ ಸ್ಥಾಪಕಾಧ್ಯಕ್ಷ ಸುಧಾಕರ್‌ ಪೂಜಾರಿ ಸ್ವಾಗತಿಸಿದರು. ರತ್ನಾಕರ ವರಂಗ, ನಿತಿನ್‌ ಚರಿತ್ರೆ, ಸಂತೋಷ್‌ ಪೂಜಾರಿ ಹಾಗೂ ಹಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕಾರ್ಯದರ್ಶಿ ಸಂದೇಶ್‌ ಕೋಟ್ಯಾನ್‌ ವಂದಿಸಿದರು. ಶ್ರೀನಿವಾಸ್‌ ಪೂಜಾರಿ ಯರ್ಲಪಾಡಿ ಮತ್ತು ಅಜಿತ್‌ ಶಿರ್ಲಾಲು ಕ್ರೀಡಾಕೂಟವನ್ನು ನಿರೂಪಿಸಿದರು.

ಸಮಾರೋಪ ಸಮಾರಂಭ
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೊಕೇಶ್‌ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್‌ ಎಸ್.‌ ಕೋಟ್ಯಾನ್‌, ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ್‌ ಕೋಟ್ಯಾನ್‌ ಮತ್ತು ಇಂಟೆಕ್‌ ಉಡುಪಿ ಜಿಲ್ಲಾ ಅಧ್ಯಕ್ಷ ಕಿರಣ್‌ ಹೆಗ್ಡೆ ಸಂದರ್ಭೊಚಿತವಾಗಿ ಮಾತನಾಡಿ ಶುಭಹಾರೈಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಉದ್ಯಮಿ ಸುಧಾಕರ ಕೆ. ಬಂಗೇರ, ಕಾರ್ಕಳ ರೋಟರಿ ಕ್ಲಬ್‌ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಸೂರಾಲು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸುಧಾಕರ್‌ ಎಂ. ಶೆಟ್ಟಿ ಸೂರಾಲು, ಉದ್ಯಮಿ ಜಯಪ್ರಕಾಶ್‌ ದೇವಾಡಿಗ, ಬಜಗೋಳಿ ಬಿಲ್ಲವ ಸಂಘದ ಕಾರ್ಯದರ್ಶಿ ಅನಿಲ್‌ ಪೂಜಾರಿ ಮಾಳ, ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ, ಸಂದೇಶ್ ಕೋಟ್ಯಾನ್‌, ಕಾರ್ಕಳ ಘಟಕದ ಕ್ರೀಡಾ ನಿರ್ದೇಶಕ ಮಂಜುನಾಥ್‌ ಕೋಟ್ಯಾನ್ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಕ್ರೀಡಾ ನಿರ್ದೇಶಕ ತಾರನಾಥ ಕೋಟ್ಯಾನ್‌ ಸೂರಾಲು ಸ್ವಾಗತಿಸಿದರು.

ವಿಜೇತರು
ಯುವವಾಹಿನಿಯ 35 ಘಟಕಗಳಲ್ಲಿ 21 ಘಟಕ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪಡುಬಿದ್ರೆ ಘಟಕ ಚಾಂಪಿಯನ್‌ ಸ್ಥಾನವನ್ನು ಪಡೆದರೆ ಮಾಣಿ ಘಟಕ ರನ್ನರ್‌ ಅಪ್‌ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.





























































































































error: Content is protected !!
Scroll to Top