ಕಾರ್ಕಳ : ಗಾಳಿ ಮಳೆಗೆ ಮಿಯ್ಯಾರು ಗ್ರಾಮದ ಕುಡುಪಾಜೆ ಶಕುಂತಲ ಎಂಬವರ ಹಟ್ಟಿ ಬಿದ್ದು 2 ಲಕ್ಷ ರೂ. ನಷ್ಟ ಸಂಭವಿಸಿದೆ. ಕಾರ್ಕಳದ ಬೊಬ್ಬಳ ರವೀಂದ್ರ ಹೆಗ್ಡೆ ಅವರ ಹಟ್ಟಿ ಬಿದ್ದು ಸಂಪೂರ್ಣ ಹಾನಿಯಾಗಿ 2ಲಕ್ಷ ರೂ. ನಷ್ಟ ಉಂಟಾಗಿದೆ. ಈದು ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು 75 ಸಾ. ರೂ. ನಷ್ಟ ಸಂಭವಿಸಿದೆ.

ಮಳೆ ಪ್ರಮಾಣ
ಕಾರ್ಕಳ 22.6 ಮಿ.ಮೀ., ಇರ್ವತ್ತೂರು 37.8 ಮಿ. ಮೀ., ಅಜೆಕಾರು 30.8 ಮಿ. ಮೀ., ಸಾಣೂರು 26.8 ಮಿ. ಮೀ., ಕೆದಿಂಜೆ 35.8 ಮಿ. ಮೀ., ಮುಳಿಕಾರು 34.8 ಮಿ. ಮೀ., ಕೆರ್ವಾಶೆ 37.0 ಮಳೆಯಾಗಿದ್ದು ತಾಲೂಕಿನಲ್ಲಿ 32.23 ಸರಾಸರಿ ಮಳೆಯಾಗಿದೆ.




















