ಪಳ್ಳಿಯಲ್ಲಿ ಮನೆಗೆ ಹಾನಿಯಾಗಿ 1 ಲ. ರೂ. ನಷ್ಟ
ಕಾರ್ಕಳ : ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ. ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಚರ್ಚ್‌ನ ಆವರಣ ಗೋಡೆಯ ಕುಸಿದು ಬಿದ್ದಿದೆ. ತಹಶೀಲ್ದಾರರ ಮಾರ್ಗದರ್ಶನದಂತೆ ಗ್ರಾಮ ಆಡಳಿತ ಅಧಿಕಾರಿ ಸುಕೇಶ್ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣವೇ ದುರಸ್ತಿಗೊಳಿಸುವಂತೆ ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ.

ಜು. 16ರಂದು ಸುರಿದ ಮಳೆಗೆ ಪಳ್ಳಿ ಗ್ರಾಮದ ಮಂಗಲ್ದಿ ಮಠ ರಸ್ತೆಯ ಶಿವ ಪಾಣ ಅವರ ಮನೆಗೆ ಹಾನಿಯಾಗಿ ಅಂದಾಜು 1 ಲಕ್ಷ ರೂ. ನಷ್ಟ ಸಂಭವಿಸಿದೆ.

ಮಳೆ ಪ್ರಮಾಣ
ಕಾರ್ಕಳ 63.2 ಮಿ. ಮೀ., ಇರ್ವತ್ತೂರು 57.6 ಮಿ.ಮೀ., ಅಜೆಕಾರು 97.4 ಮಿ.ಮೀ., ಸಾಣೂರು 72.8 ಮಿ. ಮೀ., ಕೆದಿಂಜೆ 64.4 ಮಿ. ಮೀ., ಮುಳಿಕಾರು 86.4 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 80.6 ಮಿ. ಮೀ. ಮಳೆಯಾಗಿದ್ದು, 74.62 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.
























