ಜೇಸಿಐ ಕಾರ್ಕಳ ರೂರಲ್‌ನ ಜೂನಿಯರ್ ಜೇಸಿ ವಿಭಾಗಕ್ಕೆ ಅತ್ಯುತ್ತಮ ವಿಭಾಗ ಪ್ರಶಸ್ತಿ

ಕಾರ್ಕಳ : ಜೇಸಿಐ ಭಾರತದ ವಲಯ 15ರ ಪ್ರಾಂತ್ಯ ಬಿ ಯ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ ಹಾಗೂ ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿಯನ್ನು ಜೇಸಿಐ ಕಾರ್ಕಳ ರೂರಲ್‌ನ ಜೂನಿಯರ್ ಜೇಸಿ ವಿಭಾಗ ಪಡೆದುಕೊಂಡಿದೆ.
ಸತೀಶ್ ಪೂಜಾರಿ ಕಲತ್ರಪಾದೆ ಅವರಿಂದ ಘಟಕ ಸ್ಥಾಪನೆಗೊಂಡಿದ್ದು, ಪ್ರಸ್ತುತ ದಶಮಾನೋತ್ಸವ ಸಂಭ್ರಮದಲ್ಲಿದೆ. ಘಟಕವು ಜೂನಿಯರ್ ಜೇಸಿ ವಿಭಾಗದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜು. 13 ರಂದು ಕುಂದಾಪುರದಲ್ಲಿ ನಡೆದ ಜೂನಿಯರ್ & ಲೇಡಿ ಜೇಸಿ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಅವರು ಜೂನಿಯರ್ ಜೇಸಿ ಅಧ್ಯಕ್ಷೆ ದಿಯಾ ರಾಜೇಶ್ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಕಾರ್ಕಳ ರೂರಲ್ ಘಟಕದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ, ವಲಯ ಉಪಾಧ್ಯಕ್ಷ ಪ್ರಶಾಂತ್‌ ಕುಮಾರ್‌, ಜೂನಿಯರ್ ಜೆಸಿ ವಲಯ ನಿರ್ದೆಶಕ ದರ್ಷಿತ್ ಆರ್. ಶೆಟ್ಟಿ, ಘಟಕದ ಪೂರ್ವಾಧ್ಯಕ್ಷರಾದ ವೀಣಾ ರಾಜೇಶ್‌ ಭಂಡಾರಿ, ಪ್ರಕಾಶ್ ಪೂಜಾರಿ ಕೆರ್ವಾಶೆ, ಸಂತೋಷ್‌ ಬಂಗೇರಾ, ಮತ್ತು ಸದಸ್ಯರಾದ ಮಮತಾ ಸಂತೋಷ್‌, ಶ್ವೇತಾ ಅರುಣ್‌, ಹರಿಣಿ ಬಂಗೇರ, ರಕ್ಷಣ್, ರಿಯಾ, ಶರ್ವಾಣಿ ಹಾಗು ಅವಿಷ್ಕ ಉಪಸ್ಥಿತರಿದ್ದರು.



































































































error: Content is protected !!
Scroll to Top