ಸ್ವ – ಉದ್ಯಮ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಆಶಾಕಿರಣ ಕಾರ್ಕಳ ಕೆಜಿಟಿಟಿಐ

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ವ – ಉದ್ಯಮ ನಡೆಸಲು ಮತ್ತು ಈಗಿನ ಕಾಲಘಟ್ಟದ ಅವಶ್ಯಕತೆಗೆ ತಕ್ಕಂತೆ ಕೌಶಲ್ಯ ಆಧಾರಿತ ತರಬೇತಿ ಒದಗಿಸುವ ನಿಟ್ಟಿನಲ್ಲಿ KGTTI (ಕರ್ನಾಟಕ ಜರ್ಮನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಕಾರ್ಕಳದಲ್ಲಿ ಸ್ಥಾಪನೆಯಾಗಿದೆ.

ಅನುಭವಿ ಶಿಕ್ಷಕರಿಂದ ಸಿಸ್ಕೋ ಸರ್ಟಿಫೈಡ್ ನೆಟ್ ವರ್ಕ್ ಅಸೋಸಿಯೇಟ್ (CCNA) – ರೂಟಿಂಗ್ ಮತ್ತು ಸ್ವಿಚಿಂಗ್, ಸಿಸ್ಕೋ ಐಟಿ ಎಸೆನ್ಸಿಯಲ್ಸ್ (ITE), ಟ್ಯಾಲಿ ಪ್ರೈಮ್, ಮಾಸ್ಟರ್‌ ಕ್ಯಾಮ್, ಸಿಎನ್ ಸಿ ಮೆಷಿನಿಸ್ಟ್ ಟರ್ನಿಂಗ್ ಮತ್ತು ಮಿಲ್ಲಿಂಗ್‌, ಸಿಎನ್‌ಸಿ ಪ್ರೋಗ್ರಾಮಿಂಗ್ ಮತ್ತು ಒಪರೇಶನ್ -ಟರ್ನಿಂಗ್, ಸಿಎನ್‌ಸಿ ಪ್ರೋಗ್ರಾಮಿಂಗ್ ಮತ್ತು ಒಪರೇಶನ್–ಮಿಲ್ಲಿಂಗ್‌, ಆಟೋಕಾಡ್, ಕ್ಯಾಟಿಯ R2022X ಕೋರ್ಸ್‌ಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಕಳೆದ 2 ವರ್ಷಗಳಿಂದ ಕಾರ್ಕಳದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ತರಬೇತಿ ಕೇಂದ್ರದ ನಿರ್ದೇಶಕ ಗಿರಿಧರ್ ಸಾಲ್ಯಾನ್ ಮತ್ತು ಸಿಬ್ಬಂದಿ ವರ್ಗದ ಮುತುವರ್ಜಿಯಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯದ ಅಲ್ಪಾವಧಿ ತರಬೇತಿ ನೀಡುವ ಕಾರ್ಯದಲ್ಲಿ ಸಂಸ್ಥೆ ಯಶಸ್ಸು ಕಾಣುತ್ತಿದೆ. ಈವರೆಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ನೇರ ಉದ್ಯೋಗಕ್ಕೆ ನೇಮಕವಾಗಿರುತ್ತಾರೆ. ಇದರ ಜೊತೆಗೆ ಇಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸಿರುತ್ತಾರೆ. ಸ್ವ ಸಾಮರ್ಥ್ಯದಿಂದ ಉದ್ಯೋಗ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಶೇಕಡಾ 80% ಗಿಂತ ಅಧಿಕ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿರುವುದು ಅತ್ಯಂತ ಗಮನಾರ್ಹ ಹಾಗೂ ಸಾರ್ಥಕ್ಯದ ಸಂಗತಿಯಾಗಿದೆ.

1.60 ಎಕ್ರೆ ಜಾಗದಲ್ಲಿ ಕ್ಯಾಂಪಸ್‌ ವಿಸ್ತಾರ
ಕಾರ್ಕಳದಲ್ಲಿ KGTTI (ಕರ್ನಾಟಕ ಜರ್ಮನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಪ್ರಾರಂಭಿಸಬೇಕೆಂಬುದು ನನ್ನ ಕನಸಾಗಿತ್ತು. ಸಂಸ್ಥೆಯ ಸ್ವಂತ ಕಟ್ಟಡಕ್ಕಾಗಿ ಈಗಾಗಲೇ 1.60 ಎಕ್ರೆ ಜಮೀನನ್ನು ಕಾಯ್ದಿರಿಸಿ ಶಾಶ್ವತ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ಕಾರ್ಕಳ ಕ್ಷೇತ್ರದ ವಿದ್ಯಾರ್ಥಿಗಳು ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು.
ವಿ. ಸುನಿಲ್‌ ಕುಮಾರ್‌
ಶಾಸಕರು, ಕಾರ್ಕಳ









































































































error: Content is protected !!
Scroll to Top