ಹಿಂದೂ ಜಾಗರಣ ವೇದಿಕೆ ಮುಖಂಡ ಸಮಿತ್‌ ರಾಜ್‌ ಧರೆಗುಡ್ಡೆ ಪೊಲೀಸ್‌ ವಶಕ್ಕೆ

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಮುಖಂಡ ಸಮಿತ್‌ ರಾಜ್‌ ಧರೆಗುಡ್ಡೆ ಅವರನ್ನು ಜೂ. 26ರಂದು ಪೊಲೀಸರು ಕಾರ್ಕಳದಲ್ಲಿ ವಶಕ್ಕೆ ಪಡೆದಿದ್ದಾರೆ. ಕಾರ್ಕಳ ಅನಂತಶಯನ ಬಳಿಯ ಎಸ್‌ಎಸ್‌ ಕಾಂಪ್ಲೆಕ್ಸ್‌ನಲ್ಲಿರುವ ಸಮಿತ್‌ ರಾಜ್‌ ಅವರ ಫರ್ನಿಚರ್‌ ಮಳಿಗೆಗೆ ಬುಧವಾರ ಮಧ್ಯಾಹ್ನ 12:30 ವೇಳೆಗೆ ಬಂದ ಮೂಡುಬಿದಿರೆ ಠಾಣೆಯ ಐವರು ಪೊಲೀಸರು ಸಮಿತ್‌ ರಾಜ್‌ ಅವರನ್ನು ವಶಕ್ಕೆ ಪಡೆದಿರುತ್ತಾರೆ. ಮೂಲತಃ ಮೂಡುಬಿದಿರೆ ತಾಲೂಕು ಧರೆಗುಡ್ಡೆಯ ಸಮಿತ್‌ ರಾಜ್‌ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವುದು ದೃಢವಾಗಿದ್ದರೂ ಯಾತಕ್ಕಾಗಿ ಕರೆದುಕೊಂಡು ಹೋಗಿದ್ದಾರೆ ಎನ್ನುವುದು ಇನ್ನಷ್ಟೆ ತಿಳಿದುಬರಬೇಕಿದೆ.









































































































error: Content is protected !!
Scroll to Top