ಜನನಿ ಮಿತ್ರ ಮಂಡಳಿ ವಾಂಟ್ರಾಯಿ ಪದವು – ವನಮಹೋತ್ಸವ

ಕಾರ್ಕಳ : ಜನನಿ ಮಿತ್ರ ಮಂಡಳಿ ವಾಂಟ್ರಾಯಿ ಪದವು ಇದರ ವತಿಯಿಂದ ಕಲಂಬಾಡಿ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಉಪ ವಲಯ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ, ಗಸ್ತು ಅರಣ್ಯ ಪಾಲಕ ಸುರೇಶ್ ವಿದ್ಯಾರ್ಥಿಗಳಿಗೆ ವಿವಿಧ ಗಿಡಗಳ ಕುರಿತು ಮಾಹಿತಿ ನೀಡಿದರು. ಶಾಲಾ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ.ಯವರು ಉಪಸ್ಥಿತರಿದ್ದರು. ಜನನಿ ಮಿತ್ರ ಮಂಡಳಿಯ ಅಧ್ಯಕ್ಷ ದಿವಾಕರ ಎಂ. ಬಂಗೇರ ಸ್ವಾಗತಿಸಿ, ಸದಾನಂದ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಮೂಲ್ಯ ವಂದಿಸಿದರು.









































































































error: Content is protected !!
Scroll to Top