36 ವರ್ಷಗಳ ಬಳಿಕ ಒಂದಾದ ತಾಯಿ-ಮಗ

ಮಂಗಳೂರು : ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ 36 ವರ್ಷಗಳ ಬಳಿಕ ಮನೆಗೆ ವಾಪಸ್ಸಾದ ಘಟನೆ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದಲ್ಲಿ ನಡೆದಿದೆ.

ಸಂಕಪ್ಪ ಹಾಗೂ ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್, ತಮ್ಮ 25ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಮುಂಬೈಯತ್ತ ತೆರಳಿದ್ದರು. ಬಳಿಕ ಸುಮಾರು 7 ತಿಂಗಳು ಪತ್ರದ ಮುಖೇನ ಮನೆಯವರ ಜೊತೆ ಸಂರ್ಪದಲ್ಲಿದ್ದರು. ನಂತರ ಸಂಪರ್ಕ ಕಡಿದುಕೊಂಡು ಎಲ್ಲಿದ್ದಾರೆಂದು ಪತ್ತೆಯೇ ಇರಲಿಲ್ಲ.
ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಚಂದ್ರಶೇಖರ್​​, ಮುಂಬೈಯ ದೇವಸ್ಥಾನ, ಮಂದಿರ,ಗಳಲ್ಲಿ ತಿರುಗಾಡಿಕೊಂಡು 10 ವರ್ಷಗಳನ್ನು ಕಳೆದಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಚಂದ್ರಶೇಖರ್​ಗೆ ಮುಂಬೈನಲ್ಲಿ ಬಾಲು ಕಾಂಬ್ಳೆ ಎಂಬ ಮರಾಠಿ ಕುಟುಂಬದ ಆಸರೆ ಸಿಕ್ಕಿದೆ. ಬಾಲು ಕಾಂಬ್ಳೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಚಂದ್ರಶೇಖರ್​​ಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದು, ತಕ್ಕಮಟ್ಟಿಗೆ ಸರಿಯಾಗಿದ್ದರು. ಬಳಿಕ ಬಾಲು ಕಾಂಬ್ಳೆ ಅವರ ಹೋಟೆಲ್​ನಲ್ಲೇ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ದೈವ ಅಭಯ
ಚಂದ್ರಶೇಖರ್ ಪತ್ತೆಗಾಗಿ ಕುಟುಂಬದವರಿಂದ ಹಲವು ಪ್ರಯತ್ನ ನಡೆದಿತ್ತು. ಹಲವು ಕಡೆ ಹರಕೆಗಳನ್ನು ಹೊತ್ತಿದ್ದರು. ಮನೆಯಲ್ಲಿಯೇ ‌ಮಂತ್ರದೇವತೆಯನ್ನು‌ ಆರಾಧಿಸಿಕೊಂಡು ಬಂದಿದ್ದ ಚಂದ್ರಶೇಖರ್ ಕುಟುಂಬಕ್ಕೆ ಕೆಲವು ತಿಂಗಳ ಹಿಂದೆ ಮನೆಯಲ್ಲಿ ನಡೆದ ದರ್ಶನದ ಸಮಯದಲ್ಲಿ ಮಗ ಬದುಕಿದ್ದು, ಒಂದು ವರ್ಷದೊಳಗೆ ಮನೆಗೆ ಬರುವಂತೆ ಮಾಡುತ್ತೇನೆ ಎಂದು ಮಂತ್ರದೇವತೆ‌ ದೈವ ಅಭಯ ನೀಡಿತ್ತು. ನಂತರ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಊರ ವ್ಯಕ್ತಿಯೊಬ್ಬರಿಂದ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿದೆ. ಆ ಬಳಿಕ ಚಂದ್ರಶೇಖರ್ ಅವರ ಪತ್ತೆಗಾಗಿ ಊರವರು ಮುಂಬೈಯಲ್ಲಿ ನೆಲೆಸಿರುವ ಪರಿಚಯಸ್ಥರನ್ನು ಸಂರ್ಪಕಿಸಿದ್ದಾರೆ. ಕೊನೆಗೆ ಆಶ್ರಯ ನೀಡಿದ ಕುಟುಂಬದವರ ದೂರವಾಣಿ ಸಂಖ್ಯೆ ಲಭ್ಯವಾಗಿದೆ. ಮೇ 29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮನೆಗೆ ಬಂದ ಬಳಿಕ ಮಾನಸಿಕ ಅನಾರೋಗ್ಯದಿಂದ ಭಾಗಶಃ ಗುಣಮುಖರಾಗಿದ್ದಾರೆ. ಸದ್ಯ ದೈವದ ಸೇವೆಯ ಬಳಿಕ ದುಡಿಮೆಗಾಗಿ ವಾಪಸ್​ ಮುಂಬೈಗೆ ಹೋಗಿದ್ದು, ಮನೆಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.



































































































error: Content is protected !!
Scroll to Top