ಫ್ಯಾಟಿ ಲಿವರ್ ಡಿಸೀಸ್

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಫ್ಯಾಟಿ ಲಿವರ್ ಡಿಸೀಸ್‌ (Fatty liver disease)ನ ಬಗ್ಗೆ ತಿಳಿದುಕೊಳ್ಳೋಣ.

ಏನಿದು ಫ್ಯಾಟಿ ಲಿವರ್ ಡಿಸೀಸ್?
ಯಕೃತ್ ಜೀವಕೋಶಗಳಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕೆ ಫ್ಯಾಟಿ ಲಿವರ್ ಡಿಸೀಸ್ ಎಂದು ಕರೆಯುತ್ತಾರೆ.

ಲಕ್ಷಣಗಳು
ಅನೇಕರಲ್ಲಿ ಇದರ ಲಕ್ಷಣಗಳು ಕಾಣಿಸುವುದಿಲ್ಲ. ಕೆಲವರಲ್ಲಿ ನಿತ್ರಾಣ, ದೌರ್ಬಲ್ಯ, ಉದರಶೂಲೆ, ಒಮ್ಮೆ ಅಧಿಕ ಹಸಿವಾಗುವುದು, ಕೆಲವೊಮ್ಮೆ ಹಸಿವಾಗದೆ ಇರುವುದು, ಅಜೀರ್ಣ ಕಂಡು ಬರುತ್ತದೆ. ಮುಂದಿನ ಹಂತದಲ್ಲಿ ಅಸಿಡಿಟಿ ಲಕ್ಷಣಗಳು ಕಂಡುಬರುತ್ತದೆ. ಯಾರಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಬೊಜ್ಜುತನ, ಪಿಸಿಓಡಿ, ಹೈಪೋಥೈರಾಯ್ಡಿಸಂ, ಆತಂಕ ಇರುತ್ತದೆಯೋ ಈ ರೋಗವು ಕಾಡುವುದು ಜಾಸ್ತಿ. ಈ ರೋಗವು ಮಧ್ಯ ವಯಸ್ಸಿನಲ್ಲಿ ಕಂಡುಬರುತ್ತದೆ.

ಕಾರಣಗಳು
ಅತ್ಯಧಿಕ ಕೊಬ್ಬು ಆಹಾರ ಸೇವನೆ. ಚಟುವಟಿಕೆ ಇಲ್ಲದ ಜೀವನ ಶೈಲಿ. ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್ ಸೇವನೆ, ಮದ್ಯಪಾನ ಸೇವನೆ.

ಇದರಲ್ಲಿ ಎರಡು ವಿಧ. ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಹಾಗು ನೋನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್.

ಯಕೃತ್ ನಮ್ಮ ದೇಹದಲ್ಲಿನ ದೊಡ್ಡ ಅಂಗವಾಗಿದ್ದು ಜೀರ್ಣಕ್ರಿಯೆ ಇದರ ಪ್ರಧಾನ ಕಾರ್ಯವಾಗಿದೆ. ಆಯುರ್ವೇದದಲ್ಲಿ ಇದನ್ನು ಯಕೃತ್ ದಲೂದರವೆಂದು ಕರೆಯುತ್ತಾರೆ. ಇದು ಕಫ ದೋಷ ಹಾಗೂ ಮೇದ ಧಾತುವಿನ ವೃದ್ಧಿಯಿಂದ ಸಂಭವಿಸುತ್ತದೆ. ಇದರಲ್ಲಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಾಗುತ್ತಾ ಹೋಗುತ್ತದೆ.
ಯಾವಾಗ ಅತ್ಯಧಿಕ ಹೊಟ್ಟೆನೋವು, ಕಣ್ಣು ಹಾಗೂ ತ್ವಚೆಯು ಹಳದಿ ಬಣ್ಣ ಆದಲ್ಲಿ, ವಿಪರೀತ ವಾಂತಿ ಆಗುತ್ತಿದ್ದರೆ, ಒಂದೇ ಸಮನೆ ದೇಹದ ತೂಕ ಕಡಿಮೆಯಾಗುತ್ತಿದ್ದರೆ, ಶ್ವಾಸ ತೆಗೆದುಕೊಳ್ಳಲು ಕಷ್ಟವಾಗುತ್ತಿದ್ದರೆ, ಮಾನಸಿಕ ಗೊಂದಲವಾಗುತ್ತಿದ್ದರೆ ವೈದ್ಯರನ್ನು ಕೂಡಲೇ ತೋರಿಸಿ.

ಫ್ಯಾಟಿ ಲಿವರ್ ಡಿಸೀಸ್ ಅನ್ನು ತಡೆಯಲು ಏನು ಮಾಡಬೇಕು?
ಕೊಬ್ಬು, ಜಿಡ್ಡಿನ ಪದಾರ್ಥವನ್ನು ಸೇವಿಸಬೇಡಿ. ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್, ಮದ್ಯಪಾನ ಸೇವನೆ ಮಾಡಬಾರದು. ಬೊಜ್ಜುತನ ಕಡಿಮೆ ಮಾಡಿಕೊಳ್ಳಿ. ವ್ಯಾಯಾಮ ನಡಿಗೆ ಯೋಗಾಸನಗಳನ್ನು ದಿನಾಲು ಮಾಡಿ. ಸರಿಯಾಗಿ ನೀರನ್ನು ಸೇವಿಸಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಅಲೋವೆರಾ ಜ್ಯೂಸ್ ಅನ್ನು ಕುಡಿಯಿರಿ. ಅಮೃತಬಳ್ಳಿಯ ಕಷಾಯವನ್ನು ಮಾಡಿ ಕುಡಿಯಿರಿ. ನೆಲನೆಲ್ಲಿ ಕಷಾಯ ಸೇವನೆ ಒಳ್ಳೆಯದು. ಒಂದು ಚಮಚ ಕರಿಮೆಣಸು ಒಂದು ಚಮಚ ಜೇನು ತುಪ್ಪದ ಜೊತೆ ಸೇವಿಸಿ.

ಆಯುರ್ವೇದ ಮದ್ದು
ಕಟುಕಿ, ನೆಲನಲ್ಲಿ, ಆಡುಸೋಗೆ, ಹಿಪ್ಪಳಿ, ಅಮೃತಬಳ್ಳಿ, ಆರೋಗ್ಯವರ್ದಿನಿ ವಟಿ, ತ್ರಿಫಲ ಚೂರ್ಣ, ಪುನರ್ನವ ಮಂಡರ ಮುಂತಾದವುಗಳು. ಪಂಚಕರ್ಮದಲ್ಲಿ ವಮನ ಹಾಗು ವಿರೇಚನ.









































































































error: Content is protected !!
Scroll to Top