ಒಂದೇ ದಿನ 930 ವಾಹನ ತಪಾಸಣೆ – 282 ಪ್ರಕರಣ ದಾಖಲು
ಉಡುಪಿ : ಶಾಲಾ ವಾಹನಗಳ ಸಂಚಾರ ನಿಯಮ ಪಾಲನೆ ಕುರಿತು ಎಸ್‌ಪಿ ಡಾ. ಹರಿರಾಂ ಶಂಕರ್ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲೆಯಾದ್ಯಂತ ತಪಾಸಣೆ ನಡೆಯಿತು. ಒಂದೇ ದಿನದಲ್ಲಿ 930 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದ್ದು, 282 ಪ್ರಕರಣಗಳನ್ನು ದಾಖಲಿಸಲಾಯಿತು. 1.58 ಲಕ್ಷ ರೂ. ದಂಡವನ್ನೂ ವಿಧಿಸಲಾಯಿತು. ಸೂಕ್ತ ದಾಖಲೆ ಹೊಂದದೇ ಇರುವ 39 ಪ್ರಕರಣ, ಮದ್ಯಪಾನ ಚಾಲನೆ 1 ಪ್ರಕರಣ, ಸಾಮರ್ಥ್ಯಕ್ಕಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು ಹೇರಿಕೊಂಡು ಸಾಗಿದ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು. ತಪಾಸಣೆಯಲ್ಲಿ ಐವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 30 ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.





