ಸಂವಹನದಿಂದ ದೀರ್ಘಾಯಸ್ಸು – ಡಾ. ವಿರೂಪಾಕ್ಷ ದೇವರಮನೆ
ಕಾರ್ಕಳ : ಮನುಷ್ಯ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಬೆರೆತು ಸಂವಹನ ಶೀಲನಾಗಿದ್ದರೆ ದೀರ್ಘಾಯಸ್ಸು ಹೊಂದಿರುತ್ತಾನೆಂದು ಜಾಗತಿಕ ಸಮಿಕ್ಷೆಯ ವರದಿಯಲ್ಲಿ ಅನಾವರಣಗೊಂಡಿದೆ. ಆದ್ದರಿಂದ ಎಲ್ಲರೊಂದಿಗೆ ಉತ್ತಮ ಸಂವಹನವನ್ನಿಟ್ಟುಕೊಳ್ಳೋಣ ಎಂದು ಮನೊವೈದ್ಯ ಡಾ. ವಿರುಪಾಕ್ಷ ದೇವರಮನೆ ಅಭಿಪ್ರಾಯಪಟ್ಟರು. ಅವರು ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಂಗಣದಲ್ಲಿ ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ನಡೆದ ಮುಸ್ಸಂಜೆ ಮಾತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ವಾಸುದೇವ ರಾವ್, ಗೌರವಾಧ್ಯಕ್ಷ ಡಾ. ಬಿ. ಮಂಜುನಾಥ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯರಾಮ್ ಕಾಮತ್ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಪ್ರದೀಪ್ ನಾಯಕ್ ಸ್ವಾಗತಿಸಿದರು. ಜಗದೀಶ್ ಗೊಖಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಕಮಲಾಕ್ಷ ಕಾಮತ್ ವಂದಿಸಿದರು. ಸಂಘದ ಉಪಾಧ್ಯಕ್ಷ ಮೋಹನದಾಸ ಪೈ ಸಹಕರಿಸಿದರು.






