ಆ. 11 : ವಿಧಾನಮಂಡಲ ಮುಂಗಾರು ಅಧಿವೇಶನ

ಬೆಂಗಳೂರು : ಆಗಸ್ಟ್ 11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, 2 ವಾರಗಳ ಕಾಲ ನಡೆಯಲಿದೆ. ಈಗಷ್ಟೇ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಕಾಂಗ್ರೆಸ್ ಸರ್ಕಾರ, ಇದೀಗ ಆಂತರಿಕ ಹಗ್ಗಜಗ್ಗಾಟ ಎದುರಿಸುತ್ತಿದೆ. ಇದರ ಜೊತೆಗೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್​ ಜಂಟಿಯಾಗಿ ಸರ್ಕಾರದ ಮೇಲೆ ಮುಗಿಬೀಳುವುದಂತೂ ಗ್ಯಾರಂಟಿ. ಆರ್​ ಸಿಬಿ ವಿಜಯೋತ್ಸವ ಕಾಲ್ತುಳಿತ, ಮಂಗಳೂರು ಕೋಮುಗಲಭೆ, ಸೇರಿದಂತೆ ಹಲವು ಅಸ್ತ್ರಗಳನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಅಣಿಯಾಗಿವೆ. ಪ್ರತ್ಯಾಸ್ತ್ರಗಳೊಂದಿಗೆ ಸರ್ಕಾರವೂ ಸಿದ್ಧವಾಗುತ್ತಿದೆ. ಈ ಜಟಾಪಟಿ ಮುಂಗಾರು ಅಧಿವೇಶ ರಣಾಂಗಣವಾಗುವ ಲಕ್ಷಣಗಳಿವೆ.

ಆರ್​ ಸಿಬಿ ವಿಜಯೋತ್ಸವ, ದಕ್ಷಿಣ ಕನ್ನಡ ಕೋಮುಗಲಭೆ, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಇತರೆ ಇಲಾಖೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು, ಜನಗಣತಿ, ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ಪಟ್ಟು ಹಿಡಿಯಲು ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ.











































































error: Content is protected !!
Scroll to Top