ವಿಮಾನ ದುರಂತ : ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ತವರಿಗೆ ಆಗಮನ

187 ಮೃತದೇಹಗಳನ್ನು ಪತ್ತೆಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರ – ರುಷಿಕೇಶ್ ಪಟೇಲ್

ಮುಂಬೈ : ಜೂ. 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ AI-171 ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರ ಮುಂಬೈನಲ್ಲಿರುವ ಅವರ ಮನೆಗೆ ತರಲಾಯಿತು. ಕ್ಲೈವ್ ಕುಂದರ್ ಗೋರೆಗಾಂವ್ (ಪಶ್ಚಿಮ) ಪ್ರದೇಶದಲ್ಲಿ ತಮ್ಮ ತಾಯಿ-ತಂದೆಯೊಂದಿಗೆ ವಾಸಿಸುತ್ತಿದ್ದರು.

ಮಂಗಳೂರು ಮೂಲ ಆಗಿದ್ದರೂ ಕ್ಲೈವ್‌ ಕುಟುಂಬದ ಹೆಚ್ಚಿನವರು ಮುಂಬೈನಲ್ಲಿ ನೆಲೆಸಿದ್ದಾರೆ. ಕ್ಲೈವ್‌ ಕುಂದರ್‌ ಅಮೇರಿಕಾದ ಪ್ಲೋರಿಡಾದಲ್ಲಿ ಪೈಲೆಟ್‌ ತರಬೇತಿ ಪಡೆದು, ಕೋ-ಪೈಲೆಟ್‌ ಆಗಿ ಏರ್‌ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನದಲ್ಲಿದ್ದ ಮುಖ್ಯ ಪೈಲೆಟ್‌ ಕಮಾಂಡರ್‌ ಸುಮಿತ ಸಬರ್ವಾಲ 8200 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು ಮತ್ತು ಇತರರಿಗೆ ತರಬೇತಿಯನ್ನು ನೀಡುತ್ತಿದ್ದರು. ಕ್ಲೈವ್‌ ಕುಂದರ್‌ ಅವರಿಂದಲೂ ತರಬೇತಿಯನ್ನು ಪಡೆಯುತ್ತಿದ್ದು, 1100 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು.

ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಅಪಘಾತದ ಒಂದು ವಾರದ ನಂತರ, 210 ಮೃತದೇಹಗಳ ಡಿಎನ್‌ಎ ಮಾದರಿಗಳನ್ನು ಅವರ ಕುಟುಂಬ ಸದಸ್ಯರೊಂದಿಗೆ ಹೋಲಿಸಲಾಗಿದೆ. 187 ಮೃತದೇಹಗಳನ್ನು ಪತ್ತೆಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಗುಜರಾತ್ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ.





























































































































error: Content is protected !!
Scroll to Top