ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಎಎನ್ಎಫ್ ಪೊಲೀಸರಿಗೆ ಕುಕ್ಕುಂದೂರು ಫ್ರೆಂಡ್ಸ್‌ ವತಿಯಿಂದ ಸನ್ಮಾನ

ಕಾರ್ಕಳ : 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಎಎನ್ಎಫ್ (ನಕ್ಸಲ್ ನಿಗ್ರಹ ಪಡೆ)ಸಿಬ್ಬಂದಿಯನ್ನು ಮೇ 18ರಂದು ಕುಕ್ಕುಂದೂರು ಮುಗೇರ ಕ್ರೀಡಾಂಗಣದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ವತಿಯಿಂದ ಸನ್ಮಾನಿಸಲಾಯಿತು.

ದಕ್ಷತೆ ಹಾಗೂ ಪ್ರಾಮಾಣಿಕತೆಯ ಸೇವೆಗಾಗಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರ ಪಡೆದ ಬಸವರಾಜ್ ಬಿರಾಜ್ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಅಭಿಮಾನ್ ಬೋವಿ (ಪೊಲೀಸ್ ಹೆಡ್ ಕಾನ್ಸ್ಟೇಬಲ್) ವಿಶಾಲ್ ಹೊಸಮನಿ (ಪೊಲೀಸ್ ಹೆಡ್ ಕಾನ್ಸ್ಟೇಬಲ್) ಸೋಮಲಿಂಗ ಹೂಲಿ (ಪೊಲೀಸ್ ಕಾನ್ಸ್ಟೇಬಲ್) ಹಾಗೂ ಮಂಜುನಾಥ್ ಹಳಬನವರ (ಪೊಲೀಸ್ ಕಾನ್ಸ್ಟೇಬಲ್) ಅವರನ್ನು ಸನ್ಮಾನಿಸಲಾಯಿತು.
ಕುಕ್ಕುಂದೂರು ಫ್ರೆಂಡ್ಸ್ ಗೌರವಾಧ್ಯಕ್ಷ ತ್ರಿವಿಕ್ರಮ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪೂಜಾರಿ, ಅಮ್ಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಸ್ಥಳೀಯರಾದ ಸುಂದರ, ಜಯಂತಿ ಶೆಟ್ಟಿ, ಹರೀಶ್ ಶೆಟ್ಟಿ, ಗಣೇಶ್ ನಾಯಕ್, ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷ ನಿವಾಸ ಕಿಣಿ, ಮುಗೇರ್ಕಲ ಪ್ರೀಮಿಯರ್ ಲೀಗ್ ನ ಪ್ರಕಾಶ್ ಅಚಾರ್ಯ ಉಪಸ್ಥಿತರಿದ್ದರು. ಗಣೇಶ್ ಪೈ ಪ್ರಾರ್ಥಿಸಿ, ಪ್ರಸನ್ನ ಕುಕ್ಕುಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





























































































































error: Content is protected !!
Scroll to Top