ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮೇ 6-7ರಂದು ವರ್ಷಾವಧಿ ಮಾರಿಪೂಜೆ ನಡೆಯಲಿದೆ. ಮೇ 6ರಂದು ಬೆಳಿಗ್ಗೆ ಮೂರು ಮಾರ್ಗ ಮಾರಿಯಮ್ಮ ಕಟ್ಟೆಯಲ್ಲಿ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಭಕ್ತಾಧಿಗಳು ಇಲ್ಲಿ ದೇವಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿಕೊಳ್ಳುತ್ತಾರೆ. ರಾತ್ರಿ ಮೂರು ಮಾರ್ಗದಿಂದ ಮಾರಿಗುಡಿಗೆ ಶೋಭಾಯಾತ್ರೆ ನಡೆಯಲಿದೆ. ಮೇ 7ರಂದು ಸಂಜೆ ದೇವಿಗೊಂಬೆಯನ್ನು ಮಾರಿಗುಡಿಯಿಂದ ರಾಮಸಮುದ್ರ ಬಳಿಯಿರುವ ಮಾರಿಪಲ್ಕೆಗೆ ಮೆರವಣಿಗೆಯಲ್ಲಿ ತಂದು ವಿಸರ್ಜಿಸಲಾಗುತ್ತದೆ.
ಮೇ 6-7 : ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಾರಿಪೂಜೆ






























































