ಅಜೆಕಾರು : ಅಕ್ರಮವಾಗಿ ಮರಳು ಸಾಗಾಟ – ದೂರು ದಾಖಲು

ಕಾರ್ಕಳ : ಎಳ್ಳಾರೆಯ ಕಡಂಬಳ್ಳಿಯಲ್ಲಿ ಶ್ರೀಧರ ಎಂಬವರ ಮನೆ ಬಳಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಎ. 23ರಂದು ಅಜೆಕಾರು ಪೊಲೀಸ್‌ ಠಾಣಾ ಪಿಎಸ್‌ಐ ಶುಭಕರ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮರಳು ತುಂಬಿಸಿ ಕೊಡುತ್ತಿದ್ದ ಶ್ರೀಧರ ಎಂಬಾತ ಓಡಿ ಹೋಗಿದ್ದು, ಮರಳು ಹೊರುತ್ತಿದ್ದ ಕಡ್ತಲ ಗ್ರಾಮದ ಪ್ರಕಾಶ (23) ಬೊಮ್ಮರಬೆಟ್ಟಿನ ಪ್ರವೀಣ (20)ನನ್ನು ಪೊಲೀಸರು ವಿಚಾರಿಸಿದ್ದಾರೆ. ಇವರಿಬ್ಬರು ಶ್ರೀಧರ ಎಂಬವರ ಸೂಚನೆಯಂತೆ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು (ಕೆಎ-27 ಬಿ-5338) ಪಿಕಪ್ ವಾಹನದಲ್ಲಿ ತುಂಬಿಸುತ್ತಿದ್ದರು ಎಂದು ತಿಳಿದು ಬಂದಿದ್ದು, 2 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ, 2 ಸಾ. ರೂ. ಮೌಲ್ಯದ ಅರ್ಧ ಯುನಿಟ್ ಮರಳು ಸೇರಿದಂತೆ ಮರಳು ತೆಗೆಯಲು ಬಳಸಿದ್ದ ಉಪಕರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top