ಎ. 17ರಂದು ಮಹಾಸಭೆ
ಕಾರ್ಕಳ : ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೇವಸ್ಥಾನ ಟ್ರಸ್ಟ್, ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ನೇತೃತ್ವದಲ್ಲಿ ಮೇ 18-19ರಂದು ಶ್ರೀ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವಬಿಂಬ ಪುನ:ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ನೇಮೋತ್ಸವ ನಡೆಯಲಿದೆ. ಆ ಪ್ರಯುಕ್ತ ಏ. 17ರಂದು ಸಂಜೆ 4 ಗಂಟೆಗೆ ಬಂಡಿಮಠ ಬಸ್ಸು ನಿಲ್ದಾಣದ ಬಳಿಯಿರುವ ಮೂಡುಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

















