ಎ. 11 – 12 : ಮುಡಾರು ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ

ಕಾರ್ಕಳ : ಮುಡಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವವು ಎ. 11ರಂದು ನಡೆಯಲಿದೆ. ಬೆಳಿಗ್ಗೆ 9:30ಕ್ಕೆ ಮುಡಾರು ಗ್ರಾ. ಪಂ. ಸದಸ್ಯ ಶಿವಪ್ರಸಾದ್‌ ಧ್ವಜರೋಹಣ ನೆರವೇರಿಸಲಿದ್ದಾರೆ. ನಿವೃತ್ತ ಲೆಕ್ಕಪರಿಶೋಧಕ ಸಿ.ಎ. ಕಮಲಾಕ್ಷ ಕಾಮತ್‌ ಕೆ. ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿರುವರು.
ಮುಖ್ಯ ಅತಿಥಿಗಳಾಗಿ ಮುಡಾರು ಪಾರ್ಶ್ವನಾಥ ಜೈನ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಪ್ರಭಾವತಿ, ಉದ್ಯಮಿ ಸಾಧು ಶೆಟ್ಟಿ, ಧರ್ಮರಾಜ್‌ ಜೈನ್‌, ಸಂಜೀವ ಶೆಟ್ಟಿ, ಮಹಾಬಲ ಶೇರ್ವೆಗಾರ್‌ ಭಾಗವಹಿಸಲಿರುವರು.

ಎ. 11ರ ಶುಕ್ರವಾರ ಸಂಜೆ 7 ಗಂಟೆಗೆ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಬಳಿಕ ಶಾಲಾ ಮಕ್ಕಳಿಂದ ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 8:30ರಿಂದ ಸಭಾ ಕಾರ್ಯಕ್ರಮ ಜರುಗಲಿದೆ. ಮುಡಾರು ಗ್ರಾ. ಪಂ. ಅಧ್ಯಕ್ಷೆ ಶ್ರುತಿ ದೀಪಕ್‌ ಜೈನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಡಾ. ಎ.ಕೆ. ವೆಂಕಟಗಿರಿ ರಾವ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.‌ ಆರ್., ಉದ್ಯಮಿ ಮಹಾವೀರ ಜೈನ್‌, ಸುನಿಲ್‌ ಕುಮಾರ್‌ ಜೈನ್‌, ಮಾಳ ಹರ್ಷೇಂದ್ರ ಜೈನ್‌, ನಿಕಟ ಪೂರ್ವ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿ, ಮುಖ್ಯ ಶಿಕ್ಷಕಿ ಜಯಕೃಷ್ಣ ಮೊಯ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ವೈವಿಧ್ಯ, ರಾತ್ರಿ ಗಂಟೆ 11ರಿಂದ ಪಿಂಗಾರ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ.‌

ಎ. 12ರ ಶನಿವಾರ ಸಂಜೆ 7:30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ಬಲ್ಲಾಳ್‌ ಉದ್ಘಾಟಿಸಲಿದ್ದಾರೆ. ಧವಳಾ ಕಾಲೇಜಿನ ಪ್ರಾಂಶುಪಾಲರಾದ ಪಾರ್ಶ್ವನಾಥ ಅಜ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವಿ. ಸುನಿಲ್‌ ಕುಮಾರ್‌, ಕ್ರೈಸ್ಟ್‌ ಕಿಂಗ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ, ಮುಡಾರು ಶ್ರೀಧರ್‌ ಪೂಜಾರಿ, ಬೋರ್ಗಲ್‌ಗುಡ್ಡೆ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ದೇವದಾಸ್‌ ಪಾಟ್ಕರ್‌, ಸಾಧು ಶೆಟ್ಟಿ ಹಂಬೇರ್ಡಿ, ಗ್ರಾಮ ಪಂಚಾಯತ್‌ ಸದಸ್ಯ ರಜತ್‌ ರಾಮಮೋಹನ್‌, ಮುಂಬೈ ಹಂಡ್ಯಾಲು ಜಗನ್ನಾಥ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಮೊಯ್ಲಿ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಪ್ರಮುಖರಾದ ಸುಧೀರ್‌ ಕುಮಾರ್‌ ಹಿರಿಸಾವೆ, ವಿಶ್ರಾಂತ ಪ್ರಾಂಶುಪಾಲ ದೇವದಾಸ್‌ ಕಡಂಬುಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.









































































































error: Content is protected !!
Scroll to Top