ಎ. 13 : ಸಾಣೂರಿನಲ್ಲಿ ರಾಜೇಶ್ವರಿ ನ್ಯಾಷನಲ್‌ ಸ್ಕೂಲ್‌ ಶುಭಾರಂಭ

ಕಾರ್ಕಳ : ರಾಜೇ‍ಶ್ವರಿ ಎಜ್ಯುಕೇಶನ್‌ ಫೌಂಡೇಶನ್‌ ವತಿಯಿಂದ ಕಾರ್ಕಳ ತಾಲೂಕು ಸಾಣೂರು ರಾಧಾ ಫಾರ್ಮ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಜೇಶ್ವರಿ ನ್ಯಾಷನಲ್‌ ಸ್ಕೂಲ್‌ ಎ. 13ರಂದು ಸಂಜೆ 5:30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪಟೇಲ್‌ ಮುದ್ದಣ್ಣ ಶೆಟ್ಟಿ ಕ್ಯಾಂಪಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು.
ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್‌ ಎಜ್ಯುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಮೂಡುಬಿದಿರೆ, ಧನಲಕ್ಷ್ಮೀ ಎಕ್ಸ್‌ಪೋರ್ಟ್‌ ನ ಮಾಲಕ ಕೆ. ಶ್ರೀಪತಿ ಭಟ್‌, ಜ್ಞಾನಸುಧಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈ. ಲಿಮಿಟೆಡ್‌ನ ಎಂ.ಡಿ. ಜಿ. ರಾಮಕೃಷ್ಣ ಆಚಾರ್‌, ಸಾಣೂರು ಗ್ರಾ.ಪಂ. ಅಧ್ಯಕ್ಷ ಯುವರಾಜ್‌ ಜೈನ್‌, ಪುತ್ತೂರು ಸಚಿನ್‌ ಎಂಟರ್‌ಪ್ರೈಸಸ್‌ನ ಮಾಲಕ ಮಂಜುನಾಥ ನಾಯಕ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ರಾಜೇಶ್ವರಿ ಎಜ್ಯುಕೇಶನ್‌ ಫೌಂಡೇಶನ್‌ನ ಅ‍ಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಹಾಗೂ ಕಾರ್ಯದರ್ಶಿ ಶ್ವೇತಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8095341169, 9901681557 ಸಂಪರ್ಕಿಸಬಹುದಾಗಿದೆ.





























































































































error: Content is protected !!
Scroll to Top