ಮುಡಾರು : ಜುಗಾರಿ ಅಡ್ಡೆಗೆ ದಾಳಿ – ಓರ್ವ ಪೊಲೀಸ್‌ ವಶಕ್ಕೆ

ಕಾರ್ಕಳ : ಪೊಲೀಸರು ಜುಗಾರಿ ಅಡ್ಡೆಗೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಮಾ. 30ರಂದು ಮುಡಾರು ಗ್ರಾಮದಲ್ಲಿ ಸಂಭವಿಸಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ದಿಲೀಪ್ ಜಿ. ಆರ್. ಮುಡಾರು ಗ್ರಾಮದ ಹುಕ್ರಟ್ಟೆಯ ದೇವಸ ಮನೆ ಬಳಿ ಹಾಡಿ ಪ್ರದೇಶದಲ್ಲಿ ಅಕ್ಷಯ್ ಕುಮಾರ್, ಯಶೋಧರ, ರತ್ನಾಕರ ಹಾಗೂ ಇತರರು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದಲ್ಲಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆಪಾದಿತ ಅಕ್ಷಯ್ ಕುಮಾರ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಆಪಾದಿತರು ಸ್ಥಳದಿಂದ ಓಡಿ ಹೋಗಿದ್ದಾರೆ. ಆಟಕ್ಕೆ ಬಳಸಿದ ನಗದು 600 ರೂ., ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೆಯ ಪ್ಲಾಸ್ಟಿಕ್ ಟರ್ಪಾಲ್ ಮತ್ತು ಸ್ಥಳದಲ್ಲಿದ್ದ ಆಪಾದಿತ ಅಕ್ಷಯ್ ಕುಮಾರ್‌ನ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top