ಅಧ್ಯಕ್ಷರಾಗಿ ವಿಜೇತಾ ಪೈ, ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಶರ್ಮ ಅವಿರೋಧ ಆಯ್ಕೆ
ಕಾರ್ಕಳ : ತಾಲೂಕು ಮಟ್ಟದ ಗ್ರಾಮೋದ್ಯೋಗ ವಿವಿದ್ಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅಜೆಕಾರಿನ ವಿಜೇತಾ ಪೈ ಹಾಗೂ ಉಪಾಧ್ಯಕ್ಷರಾಗಿ ನಿಟ್ಟೆಯ ಲಕ್ಷ್ಮೀನಾರಾಯಣ ಶರ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾ. 19ರಂದು ಜೋಡುರಸ್ತೆಯ ದುರ್ಗಾಪ್ರಸಾದ್ ಕಟ್ಟಡದಲ್ಲಿರುವ ಸೊಸೈಟಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ನಿರ್ದೇಶಕರಾದ ರಘುವೀರ್ ಶೆಣೈ, ಜಲಜಾ ಶೆಟ್ಟಿ, ಶರ್ಮಿಳಾ ಜೈನ್, ಪ್ರವೀಣಾ ನವೀನ್, ಎಂ. ಮಣಿ, ಉದಯ ಕುಮಾರ್ ಬೆಳ್ಮಣ್, ಗೋಪಾಲ ಮೂಲ್ಯ ಸಾಣೂರು, ಯಶೋಧರ್ ಶೆಟ್ಟಿ ಕುಕ್ಕುಂದೂರು, ಹರೀಶ್ ನಾಯಕ್ ಅಜೆಕಾರು, ಪ್ರಶಾಂತ್ ಶೆಟ್ಟಿ ಈ ಸಂದರ್ಭದಲ್ಲಿದ್ದರು. ಸುಮಿತ್ರಾ ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಸೊಸೈಟಿ ಸಿಇಒ ಅನಿತಾ ಸೋನ್ಸ್ ಸಭೆ ನಿರ್ವಹಿಸಿದರು.






























































