ಕಾರ್ಕಳ : ಕೌಡೂರು ಮಾಯಾಡಿ ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನ ವಾರ್ಷಿಕ ನೇಮೋತ್ಸವ ಮಾ. 6ರಿಂದ ಮಾ. 7 ರವರೆಗೆ ನೆರವೇರಲಿದೆ. ಮಾ. 6ರಂದು ಬೆಳಿಗ್ಗೆ ಕೆಳಬಾಳಬೆಟ್ಟು ಮನೆಯಿಂದ ಭಂಡಾರ ಇಳಿದು, ನವಕ ಪ್ರಧಾನ ಹೋಮ, ಶುದ್ಧ ಪ್ರಕ್ರಿಯೆ ನಡೆಯಲಿರುವುದು. ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು. ಸಂಜೆ 5.30ಕ್ಕೆ ಧರ್ಮರಸು ಕೊಲ, ರಾತ್ರಿ 9.30ಕ್ಕೆ ಮುಗ್ಗೆರ್ಕಳ ಕೋಲ, ರಾತ್ರಿ 12 ಗಂಟೆಗೆ ತನಿಮಾನಿಗ ಕೋಲ ನಡೆಯಲಿರುವುದು. ಮಾ. 7ರಂದು ಮಧ್ಯಾಹ್ನ 12 ಗಂಟೆಗೆ ಅಲೇರ ಪಂಜುರ್ಲಿ ಕೋಲ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಮಾ. 6 – 7 : ಕೌಡೂರು ಮಾಯಾಡಿ ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನ ವಾರ್ಷಿಕ ನೇಮೋತ್ಸವ






























































